ಭವಿಷ್ಯದ ಯುದ್ಧದಲ್ಲಿ ಭಾರತದಿಂದ ಮಾನವ ರಹಿತ ಟ್ಯಾಂಕ್, ಹಡಗು, ರೋಬೊಟಿಕ್ ಶಸ್ತ್ರಾಸ್ತ್ರ ಬಳಕೆ

Update: 2018-05-20 17:58 GMT

ಹೊಸದಿಲ್ಲಿ, ಮೇ 20: ಮಹತ್ವಾಕಾಂಕ್ಷೆಯ ರಕ್ಷಣಾ ಯೋಜನೆಯೊಂದರಲ್ಲಿ ಸರಕಾರ ಸೇನಾ ಪಡೆಗಳ ಕಾರ್ಯಾಚರಣೆ ಸನ್ನದ್ಧತೆ ವರ್ಧಿಸಲು ಕೃತಕ ಬುದ್ಧಿ ಮತ್ತೆ ಸಂಯೋಜನೆಗೆ ಕಾರ್ಯಾರಂಭಿಸಿದೆ.

ಈ ಕೃತಕ ಬುದ್ಧಿ ಮತ್ತೆ ಸಂಯೋಜನೆಯಲ್ಲಿ ಮಾನವ ರಹಿತ ಟ್ಯಾಂಕ್, ಹಡಗು, ವೈಮಾನಿಕ ವಾಹನ ಹಾಗೂ ರೋಬಟ್ ಶಶ್ತ್ರಾಸ್ತ್ರಗಳು ಸೇರಿವೆ. ಮುಂದಿನ ಜನಾಂಗದ ಯೋಗಕ್ಷೇಮಕ್ಕಾಗಿ ಸೇನೆ, ನೌಕೆ ಹಾಗೂ ವಾಯು ಪಡೆಯನ್ನು ಸನ್ನದ್ಧವಾಗಿ ಇರಿಸಲು ವಿಶಾಲ ನೀತಿ ಉಪಕ್ರಮದ ಒಂದು ಭಾಗ ಇದಾಗಿದೆ. ತನ್ನ ಸೇನೆಗಳಲ್ಲಿ ಕೃತಕ ಬುದ್ಧಿ ಮತ್ತೆಯ ಗಂಭೀರ ಅನ್ವಯದ ಅಭಿವೃದ್ಧ್ದಿಯಲ್ಲಿ ಚೀನಾ ಹೂಡಿಕೆ ಹೆಚ್ಚುಸುತ್ತಿರುವ ನಡುವೆ ಈ ಬೆಳವಣಿಗೆ ನಡೆದಿದೆ. ಭವಿಷ್ಯದ ಯೋಗಕ್ಷೇಮದ ಅಗತ್ಯತೆ ಪರಿಗಣಿಸಿದರೆ ಇದು ಅತಿ ದೊಡ್ಡ ಕ್ಷೇತ್ರ. ಆದುದರಿಂದ ಮೂರು ಪಡೆಗಳಲ್ಲಿ ಕೃತಕ ಬುದ್ಧಿ ಮತ್ತೆ ಪರಿಚಯಿಸಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದು ರಕ್ಷಣಾ ಉತ್ಪಾದನೆ ಕಾರ್ಯದರ್ಶಿ ಅಜಯ್ ಕುಮಾರ್ ಹೇಳಿದ್ದಾರೆ.

ಸೇನಾ ಪಡೆಗಳು ಹಾಗೂ ಖಾಸಗಿ ವಲಯಗಳ ನಡುವೆ ಪಾಲುದಾರ ಮಾದರಿಯಲ್ಲಿ ಅನುಷ್ಠಾನಗೊಳ್ಳಲಿರುವ ಈ ಯೋಜನೆಯ ನಿರ್ದಿಷ್ಟತೆ ಹಾಗೂ ವಿನ್ಯಾಸವನ್ನು ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ನೇತೃತ್ವದ ಅತ್ಯುನ್ನತ ಟಾಸ್ಕ್‌ಪೋರ್ಸ್ ಅಂತಿಮಗೊಳಿಸಿದೆ.

 ಇದು ಭಾರತವನ್ನು ಮುಂದಿನ ಜನಾಂಗದ ಯೋಗಕ್ಷೇಮಕ್ಕೆ ಸಿದ್ಧಗೊಳಿಸಲಿದೆ. ಈ (ಕೃತಕ ಬುದ್ಧಿ ಮತ್ತೆ) ದಿಶೆಯಲ್ಲಿ ದೇಶ ಸಾಗಬೇಕಾಗಿದೆ. ಹೆಚ್ಚು ತಂತ್ರಜ್ಞಾನ, ಹೆಚ್ಚು ಸ್ವಯಂಚಾಲಿತ ಹಾಗೂ ರೋಬೊಟ್‌ಗಳನ್ನು ಒಳಗೊಂಡ ತಂತ್ರಜ್ಞಾನ ಮುಂದಿನ ಜನಾಂಗಕ್ಕೆ ಬೇಕಾಗಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News