ಮಂಗಳೂರು: ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಪುಣ್ಯತಿಥಿ: ನುಡಿ ನಮನ

Update: 2018-05-21 08:52 GMT

ಮಂಗಳೂರು, ಮೇ 21: ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ ಪುಣ್ಯತಿಥಿಯ ಅಂಗವಾಗಿ ಸೋಮವಾರ ಬೆಳಗ್ಗೆ ಮಲ್ಲಿಕಟ್ಟೆಯಲ್ಲಿರುವ ದ.ಕ. ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನುಡಿನಮನ ಸಲ್ಲಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ದಿ.ಪ್ರಧಾನಿ ರಾಜೀವ್ ಗಾಂಧಿ ದೇಶಕ್ಕೆ ಹಾಕಿಕೊಟ್ಟಂತಹ ಕಾರ್ಯಕ್ರಮಗಳಾದ ತಂತ್ರಜ್ಞಾನ, ಯುವಕರಿಗೆ ಮತದಾನದ ಹಕ್ಕು, ಪಂಚಾಯತ್‌ರಾಜ್ ಕಾನೂನು, ಮಹಿಳಾ ಮೀಸಲಾತಿ ಮತ್ತು ಪಕ್ಷದ ಸಂಘಟನೆಯಲ್ಲಿ ಹಾಕಿಕೊಟ್ಟಂತಹ ಕಾರ್ಯಕ್ರಮಗಳ ವಿವರ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್‌ಮಾತನಾಡಿ ರಾಜೀವ್ ಗಾಂಧಿ ಪಕ್ಷಕ್ಕೆ ಮತ್ತು ರಾಷ್ಟಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸಿದರು.

ಮಾಜಿ ಶಾಸಕರಾದ ಜೆ.ಆರ್.ಲೋಬೊ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ.ಮೋಹನ್ ಮಾತನಾಡಿದರು. ಕರ್ನಾಟಕ ಸೇವಾ ದಳದ ಉಸ್ತುವಾರಿ ವಿನೋದ್ ವಿ.ಟಿ., ಮೇಯರ್ ಕೆ.ಭಾಸ್ಕರ್, ಉಪ ಮೇಯರ್ ಮುಹಮ್ಮದ್ ಕುಂಜತ್ತಬೈಲು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ಅಬ್ದುಲ್ ಸಲೀಂ, ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಜಿಲ್ಲಾ ಕಾಂಗ್ರೆಸ್ ನಾಯಕರಾದ ಹಾಜಿ ಇಬ್ರಾಹೀಂ ಕೋಡಿಜಾಲ್, ಎ.ಸಿ.ಭಂಡಾರಿ, ಕೆಪಿಸಿಸಿ ಪದಾಧಿಕಾರಿಗಳಾದ ಪುರುಶೋತ್ತಮ ಚಿತ್ರಾಪುರ, ಕಳ್ಳಿಗೆ ತಾರಾನಾಥ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ಪದ್ಮನಾಭ ನರಿಂಗಾನ, ಉಮರ್ ಪಜೀರ್, ಇದಿನಬ್ಬ ಕಲ್ಲಡ್ಕ, ನೀರಜ್ ಚಂದ್ರಪಾಲ್, ಆರಿಫ್ ಬಾವಾ ಬಂದರ್, ನಝೀರ್ ಬಜಾಲ್, ಕಾರ್ಪೊರೇಟರ್‌ಗಳಾದ ಅಶೋಕ್ ಡಿ.ಕೆ., ಪ್ರವೀಣ್ ಚಂದ್ರ ಆಳ್ವ, ಜೆಸಿಂತಾ ಆಲ್ಫ್ರೆಡ್, ಕವಿತಾ ಸನಿಲ್, ಟಿ.ಕೆ.ಶೈಲಜಾ, ಕವಿತಾ ವಾಸು, ಅಬ್ದುಲ್ ಅಝೀಝ್, ಆಶಾ ಡಿಸಿಲ್ವ, ಕುಮಾರಿ ಅಪ್ಪಿ, ಸ್ಟೀಫನ್ ಮರೋಳಿ, ಗಣೇಶ್ ಪೂಜಾರಿ, ಲೋಕೇಶ್ ಹೆಗ್ಡೆ, ಸದಾಶಿವ ಅಮೀನ್, ಅಶ್ರಫ್ ಸೇವಾ ದಳ, ರಮಾನಂದ ಪೂಜಾರಿ, ಪದ್ಮನಾಭ ಅಮೀನ್ ಮತ್ತಿತರರು ಭಾಗವಹಿಸಿದ್ದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ ಉಳ್ಳಾಲ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News