ಸನ್ಮಾರ್ಗ ರಮಝಾನ್ ವಿಶೇಷಾಂಕದಲ್ಲಿ ಕುರ್ ಆನ್ ಸ್ಪರ್ಧೆ

Update: 2018-05-21 12:23 GMT

ಮಂಗಳೂರು,ಮೇ 21: ಮೇ 9ರಂದು ಬಿಡುಗಡೆಯಾದ ಸನ್ಮಾರ್ಗ ರಮಝಾನ್ ವಿಶೇಷಾಂಕದಲ್ಲಿ ಸತತ ಮೂರನೇ ಬಾರಿ ಕುರ್‍ಆನ್ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪವಿತ್ರ ಕುರ್‍ಆನಿನ ಅಲ್ ಮಾಇದ ಮತ್ತು ಅಲ್ ಅನ್‍ಆಮ್ ಅಧ್ಯಾಯಗಳಿಗೆ ಸಂಬಂಧಿಸಿ ಈ ಸ್ಪರ್ಧೆ ನಡೆಯಲಿದ್ದು, ಶಾಲಾ ಪ್ರಶ್ನೆ ಪತ್ರಿಕೆಯ ಮಾದರಿಯಲ್ಲಿ ಇದನ್ನು ತಯಾರಿಸಲಾಗಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ರೂ. 5000, ದ್ವಿತೀಯ ರೂ. 3000, ತೃತೀಯ ರೂ. 2000 ಮತ್ತು 10 ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು. ಸ್ಪರ್ಧೆಯ ನಿಯಮಗಳು ಪ್ರಶ್ನೆಪತ್ರಿಕೆಯಲ್ಲಿವೆ.

ಸನ್ಮಾರ್ಗ ವೆಬ್ ಸೈಟ್ www.sanmarga.com ನ ಮೂಲಕವೂ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದ್ದು, ವಾಟ್ಸಾಪ್ ಮೂಲಕವೂ  ಉತ್ತರ ಕಳುಹಿಸಬಹುದು. ಸ್ಪರ್ಧೆಯ ನಿಯಮ ಮತ್ತಿತರ ಮಾಹಿತಿಗಳಿಗಾಗಿ ಈಗಾಗಲೇ ಮಾರುಕಟ್ಟೆಯಲ್ಲಿರುವ ಸನ್ಮಾರ್ಗ ಪತ್ರಿಕೆಯನ್ನು ಖರೀದಿಸಿ ಅಥವಾ www.sanmarga.com ವೆಬ್ ಸೈಟ್  ಗೆ ಭೇಟಿ ನೀಡಿ. ವಿವರಗಳಿಗಾಗಿ 0824-2422786, 9880096128 ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News