'ಪಾಪ್ಯುಲರ್ ಫ್ರಂಟ್'ನಿಂದ ಫುಡ್ ಕಿಟ್ ವಿತರಣೆ

Update: 2018-05-22 09:54 GMT

ಮಂಗಳೂರು ಮೇ 22: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿ.ಎಫ್.ಐ.), ಕರ್ನಾಟಕ ಇದರ ವತಿಯಿಂದ ಉಳ್ಳಾಲ, ಮೂಡುಬಿದಿರೆ, ಬೆಂಗರೆ, ಮುಲ್ಕಿ, ಮಂಗಳೂರು ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಈ ಬಾರಿ ನೂರಕ್ಕಿಂತ ಹೆಚ್ಚು ಕುಟುಂಬಗಳಿಗೆ ಸುಮಾರು ಒಂದೂವರೆ ಲಕ್ಷ ರೂ. ಮೌಲ್ಯದ ರಮಝಾನ್ ತಿಂಗಳ ಇಫ್ತಾರ್ ಅಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.

ಮಂಗಳೂರಿನ ಕಚೇರಿಯಲ್ಲಿ ಕಿಟ್ ವಿತರಿಸುವ ಮೂಲಕ ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ ಚಾಲನೆ ನೀಡಿದರು.

ಜಿಲ್ಲಾ ಕಾರ್ಯದರ್ಶಿ ಖಾದರ್ ಕೆ., ಸಿರಾಜ್ ಕಾವೂರು, ಸದಸ್ಯರಾದ, ಸಾದಿಕ್, ಹಾರಿಸ್ ಮಲಾರ್, ಅರ್ಶದ್ ಮಂಗಳೂರು, ರವೂಫ್ ಕಲಾಯಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News