ಹಕ್ಕು ಉಲ್ಲಂಘನೆ ತನಿಖೆ ಕೋರಿ ಐಸಿಸಿಗೆ ಫೆಲೆಸ್ತೀನ್ ಮನವಿ

Update: 2018-05-22 15:21 GMT

ಹೇಗ್ (ನೆದರ್‌ಲ್ಯಾಂಡ್ಸ್), ಮೇ 23: ಇಸ್ರೇಲ್‌ನ ವಾಸ್ತವ್ಯ (ಸೆಟಲ್‌ಮೆಂಟ್) ನೀತಿಗಳಿಗೆ ಸಂಬಂಧಿಸಿದ ಮಾನವಹಕ್ಕು ಉಲ್ಲಂಘನೆಗಳ ಬಗ್ಗೆ ತನಿಖೆ ನಡೆಸುವಂತೆ ಕೋರಿ ಫೆಲೆಸ್ತೀನ್ ವಿದೇಶ ಸಚಿವ ರಿಯಾದ್ ಅಲ್-ಮಾಲಿಕಿ ಮಂಗಳವಾರ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ಐಸಿಸಿ)ಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಇದು 2015ರಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯ ಮುಂದುವರಿದ ಭಾಗವಾಗಿದೆ.

ಫೆಲೆಸ್ತೀನ್ ವಲಯದಲ್ಲಿ ನಡೆಯುತ್ತಿರುವ ಅಪರಾಧಗಳ ಬಗ್ಗೆ ಪ್ರಾಸಿಕ್ಯೂಟರ್‌ಗಳು ತನಿಖೆ ನಡೆಸುವಂತೆ ಹಾಗೂ ಈ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ 2015ರ ಅರ್ಜಿಯಲ್ಲಿ ಫೆಲೆಸ್ತೀನ್ ಕೋರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News