ಮಸೀದಿಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ಚೀನಾ ಸೂಚನೆ

Update: 2018-05-22 16:36 GMT

ಬೀಜಿಂಗ್, ಮೇ 22: ದೇಶಭಕ್ತಿಯ ಭಾವನೆಯನ್ನು ಉದ್ದೀಪಿಸುವುದಕ್ಕಾಗಿ ಚೀನಾದಲ್ಲಿರುವ ಮಸೀದಿಗಳು ರಾಷ್ಟ್ರಧ್ವಜವನ್ನು ಹಾರಿಸಬೇಕು ಎಂದು ಚೀನಾ ಇಸ್ಲಾಮಿಕ್ ಅಸೋಸಿಯೇಶನ್ ಸೂಚಿಸಿದೆ.

ಮಸೀದಿಗಳ ಪ್ರಮುಖ ಸ್ಥಳಗಳಲ್ಲಿ ಐದು ನಕ್ಷತ್ರಗಳ ಕೆಂಪು ಧ್ವಜವನ್ನು ಪ್ರದರ್ಶಿಸಬೇಕು ಎಂಬುದಾಗಿ ಮುಸ್ಲಿಮ್ ಧರ್ಮಗುರುಗಳಿಗೆ ನಿರ್ದೇಶನ ನೀಡುವ ಹೇಳಿಕೆಯೊಂದನ್ನು ಅಸೋಸಿಯೇಶನ್ ಕಳೆದ ವಾರಾಂತ್ಯದಲ್ಲಿ ಹೊರಡಿಸಿದೆ.

ಮುಖ್ಯವಾಗಿ ನಿಂಗ್‌ಕ್ಸಿಯ, ಬೀಜಿಂಗ್, ಗನ್ಸು, ಕಿಂಗ್‌ಹಾಯ್ ಮತ್ತು ಕ್ಸಿನ್‌ಜಿಯಾಂಗ್ ಮುಂತಾದ 5 ವಲಯಗಳಲ್ಲಿ ಈ ಬಗ್ಗೆ ಪ್ರಚಾರ ಮಾಡಲೂ ಅದು ನಿರ್ಧರಿಸಿದೆ.

ದೇಶದ ಇಸ್ಲಾಮನ್ನು ನಿಯಂತ್ರಿಸುವ ಹಾಗೂ ಚೀನೀಕರಿಸುವ ಚೀನಾ ಕಮ್ಯುನಿಸ್ಟ್ ಪಕ್ಷದ ಇತ್ತೀಚಿನ ಪ್ರಯತ್ನಗಳ ಭಾಗವಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

ಮಸೀದಿಗಳಲ್ಲಿ ರಾಷ್ಟ್ರಧ್ವಜಗಳನ್ನು ಹಾರಿಸುವುದು ರಾಷ್ಟ್ರೀಯ ಮತ್ತು ನಾಗರಿಕ ಭಾವನೆಗಳನ್ನು ಗಟ್ಟಿಗೊಳಿಸುತ್ತದೆ ಹಾಗೂ ಎಲ್ಲ ಜನಾಂಗೀಯ ಗುಂಪುಗಳ ಮುಸ್ಲಿಮರಲ್ಲಿ ದೇಶಭಕ್ತಿಯ ಭಾವನೆಗಳನ್ನು ಬೆಳೆಸುತ್ತದೆ ಎಂದು ಅಸೋಸಿಯೇಶನ್‌ನ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News