ಭಾರತದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತವಾಗಿದ್ದಾರೆ: ಕೇಂದ್ರ ಸಚಿವ ರಾಜ್ ನಾಥ್ ಸಿಂಗ್

Update: 2018-05-22 16:40 GMT

ಹೊಸದಿಲ್ಲಿ, ಮೇ 22: ಅಲ್ಪಸಂಖ್ಯಾತರು ಸುರಕ್ಷಿತವಾಗಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ ಹಾಗು ಜಾತಿ ಅಥವಾ ಧರ್ಮದ ಆಧಾರದಲ್ಲಿ ತಾರತಮ್ಯ ನಡೆಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಹೇಳಿದರು.

2019ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಎಲ್ಲರೂ ಪ್ರಾರ್ಥನೆಯನ್ನು ಆರಂಭಿಸಬೇಕು ಎಂದು ದಿಲ್ಲಿಯ ಆರ್ಚ್ ಬಿಷಪ್ ಅನಿಲ್ ಜೋಸಫ್ ಕೌಟೊ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿ ರಾಜ್ ನಾಥ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.

“ನಾನು ಆ ಪತ್ರವನ್ನು ನೋಡಿಲ್ಲ. ಆದರೆ ಅಲ್ಪಸಂಖ್ಯಾತರು ಸುರಕ್ಷಿತವಾಗಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ ಹಾಗು ಜಾತಿ ಅಥವಾ ಧರ್ಮದ ಆಧಾರದಲ್ಲಿ ತಾರತಮ್ಯ ನಡೆಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಲು ನಾನು ಬಯಸುತ್ತೇನೆ” ಎಂದವರು ಹೇಳಿದರು.

“ದೇಶದ ಪ್ರಕ್ಷುಬ್ದ ರಾಜಕೀಯ ವಾತಾವರಣವು ಸಂವಿಧಾನದಲ್ಲಿ ಅಡಕವಾಗಿರುವ ಪ್ರಜಾಸತ್ತಾತ್ಮಕ ಮೌಲ್ಯಗಳು ಹಾಗು ದೇಶದ ಜಾತ್ಯತೀತ ತತ್ವಕ್ಕೆ ಅಪಾಯವೊಡ್ಡುತ್ತದೆ” ಎಂದು ಆರ್ಚ್ ಬಿಷಪ್ ಅನಿಲ್ ಕೌಟೊ ಪತ್ರದಲ್ಲಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News