ಕರಾಚಿ: ಬಿಸಿಲಿನ ಆಘಾತಕ್ಕೆ 65 ಬಲಿ

Update: 2018-05-22 16:50 GMT

ಕರಾಚಿ, ಮೇ 22: ಪಾಕಿಸ್ತಾನದ ದಕ್ಷಿಣದ ನಗರ ಕರಾಚಿಯಲ್ಲಿ ಕಳೆದ ಮೂರು ದಿನಗಳಲ್ಲಿ 65 ಮಂದಿ ಬಿಸಿಲಿನ ಹೊಡೆತಕ್ಕೆ ಬಲಿಯಾಗಿದ್ದಾರೆ ಎಂದು ಸಾಮಾಜಿಕ ಸಂಘಟನೆ ಈದಿ ಫೌಂಡೇಶನ್ ಮಂಗಳವಾರ ತಿಳಿಸಿದೆ.

ಉಷ್ಣತೆ ದಾಖಲೆಯ ಏರಿಕೆ ಕಂಡಿದ್ದು, ಮುಂದಿನ ದಿನಗಳಲ್ಲಿ ಸಾವಿನ ಪ್ರಮಾಣ ಹೆಚ್ಚಬಹುದು ಎಂಬ ಭಯ ವ್ಯಕ್ತವಾಗಿದೆ.

ದಿನದ ಉಷ್ಣತೆ ದಾಖಲೆಯ ಏರಿಕೆ ಕಂಡಿರುವ ಸಮಯದಲ್ಲೇ ಮುಸ್ಲಿಮರು ರಮಝಾನ್ ಉಪವಾಸ ಆಚರಿಸುತ್ತಿದ್ದಾರೆ. ಇದರ ಜೊತೆಗೆ ವಿದ್ಯುತ್ ಕೂಡಾ ಆಗಾಗ ಕೈಕೊಡುತ್ತಿದೆ.

ಕರಾಚಿಯಲ್ಲಿ ಸೋಮವಾರ ಉಷ್ಣತೆ 44 ಡಿಗ್ರಿ ಸೆಲ್ಸಿಯಸ್ ತಲುಪಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News