ಎಲ್ಲ ರೀತಿಯ ಜನನ ನಿಯಂತ್ರಣ ತೆಗೆದುಹಾಕಲು ಚೀನಾ ನಿರ್ಧಾರ?

Update: 2018-05-22 16:54 GMT

ಬೀಜಿಂಗ್, ಮೇ 22: ಕುಟುಂಬವೊಂದು ಹೊಂದಬಹುದಾದ ಮಕ್ಕಳ ಸಂಖ್ಯೆಯ ಮೇಲಿನ ಎಲ್ಲ ನಿಯಂತ್ರಣವನ್ನು ತೆರವುಗೊಳಿಸಲು ಚೀನಾ ಉದ್ದೇಶಿಸಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಇದು ನಿಜವಾದರೆ, ಅಸಂಖ್ಯಾತ ಮಾನವಹಕ್ಕು ಉಲ್ಲಂಘನೆಗಳಿಗೆ ಕಾರಣವಾದ ನೀತಿಯೊಂದರ ಐತಿಹಾಸಿಕ ಕೊನೆಯಾಗಲಿದೆ. ಜನಸಂಖ್ಯಾ ನಿಯಂತ್ರಣ ನೀತಿಯಿಂದಾಗಿ ಜಗತ್ತಿನ ಎರಡನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ಚೀನಾವು ಕೆಲಸಗಾರರ ಕೊರತೆಯನ್ನು ಎದುರಿಸುತ್ತಿತ್ತು.

ಸುಮಾರು 4 ದಶಕಗಳ ಹಳೆಯ ನೀತಿಯನ್ನು ರದ್ದುಪಡಿಸುವುದರಿಂದ ಉಂಟಾಗಬಹುದಾದ ದುಷ್ಪರಿಣಾಮಗಳ ಬಗ್ಗೆ ಸಂಶೋಧನೆ ನಡೆಸಲು ಚೀನಾ ಸಚಿವ ಸಂಪುಟ ಸಂಶೋಧನಾ ಆಯೋಗವೊಂದನ್ನು ನೇಮಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News