ಮ್ಯಾನ್ಮಾರ್‌ನಲ್ಲಿ ಮಾನವೀಯ ನೆರವಿನ ಪ್ರಮಾಣ ಹೆಚ್ಚಿಸಿದ ಕೆಎಸ್‌ರಿಲೀಫ್

Update: 2018-05-22 16:56 GMT

ರಿಯಾದ್ (ಸೌದಿ ಅರೇಬಿಯ), ಮೇ 22: ಮ್ಯಾನ್ಮಾರ್‌ನಲ್ಲಿ ಮಾನವಹಕ್ಕುಗಳ ಉಲ್ಲಂಘನೆಯ ಬಲಿಪಶುಗಳಿಗೆ ನೀಡಲಾಗುವ ಮಾನವೀಯ ನೆರವು ಪ್ರಮಾಣವನ್ನು ಸೌದಿ ಅರೇಬಿಯದ ಕಿಂಗ್ ಸಲ್ಮಾನ್ ಸೆಂಟರ್ ಫಾರ್ ಹ್ಯುಮೇನಿಟೇರಿಯನ್ ಏಡ್ ಆ್ಯಂಡ್ ರಿಲೀಫ್ (ಕೆಎಸ್‌ರಿಲೀಫ್) ಹೆಚ್ಚಿಸಿದೆ.

ಮ್ಯಾನ್ಮಾರ್‌ನ ಅರಕಾನ್ ಪ್ರಾಂತದ ಹಳ್ಳಿಗಳ ಅಗತ್ಯವಿರುವ ಕುಟುಂಬಗಳಿಗೆ ಕೆಎಸ್‌ರಿಲೀಫ್ ಆಹಾರದ ಚೀಲಗಳನ್ನು ವಿತರಿಸಿದೆ ಎಂದು ಸೌದಿ ಅರೇಬಿಯದ ರಿಯಾದ್‌ನಲ್ಲಿರುವ ಕೆಎಸ್‌ರಿಲೀಫ್ ಪ್ರಧಾನ ಕಚೇರಿಯಲ್ಲಿರುವ ಮಾಧ್ಯಮ ಸಲಹೆಗಾರ ಅಝಮ್ ಉಬೈದ್ ತಿಳಿಸಿದರು.

ಮ್ಯಾನ್ಮಾರ್ ಮುಸ್ಲಿಮರ ಪೈಕಿ ಅತಿ ದೊಡ್ಡ ಸಮುದಾಯವಾಗಿರುವ ರೊಹಿಂಗ್ಯಾ ಮುಸ್ಲಿಮರು ರಖೈನ್ ರಾಜ್ಯದಲ್ಲಿ ವಾಸಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News