×
Ad

ಮೇಜರ್ ಗೊಗೋಯ್ ವಿರುದ್ಧ ನ್ಯಾಯಾಂಗ ತನಿಖೆಗೆ ಆದೇಶ

Update: 2018-05-25 21:18 IST

ಹೊಸದಿಲ್ಲಿ, ಮೇ 25: ಜಮ್ಮು ಹಾಗೂ ಕಾಶ್ಮೀರದ ಶ್ರೀನಗರದಲ್ಲಿ ಬುಧವಾರ ಮಹಿಳೆ ಹಾಗೂ ಸ್ಥಳೀಯ ವ್ಯಕ್ತಿಯೊಂದಿಗೆ ರಾಷ್ಟ್ರೀಯ ರೈಫಲ್ಸ್‌ನ ಅಧಿಕಾರಿಗಳಿಂದ ಬಂಧಿತರಾಗಿರುವ ಮೇಜರ್ ಲೀತುಲ್ ಗೊಗೋಯ್ ವಿರುದ್ಧ ಭಾರತೀಯ ಸೇನೆ ಶುಕ್ರವಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ತನಿಖೆಯ ಫಲಿತಾಂಶವನ್ನು ಆಧರಿಸಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ನಿಯಮಗಳನ್ನು ಉಲ್ಲಂಘಿಸುವ ಮೂಲಕ ತಪ್ಪೆಸಗಿದ್ದಾರೆ ಎಂದು ಪತ್ತೆಯಾದಲ್ಲಿ ‘ಅನುಕರಣೀಯ ಶಿಕ್ಷೆ’ ನೀಡಲಾಗುವುದು ಎಂದು ಸೇನಾ ವರಿಷ್ಠ ಜನರಲ್ ಬಿಪಿನ್ ರಾವತ್ ಹೇಳಿದ ಬಳಿಕ ಈ ನಿರ್ಧಾರ ಹೊರಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News