ಅದಾನಿ ಫೌಂಡೇಶನ್ ಒಡೆತನದ ಆಸ್ಪತ್ರೆಯಲ್ಲಿ 111 ನವಜಾತ ಶಿಶುಗಳ ಸಾವು: ತನಿಖೆಗೆ ಆದೇಶ

Update: 2018-05-26 14:16 GMT

ಹೊಸದಿಲ್ಲಿ, ಮೇ 26; ಭುಜ್ ನಲ್ಲಿರುವ ಅದಾನಿ ಎಜುಕೇಶನ್ ಆ್ಯಂಡ್ ರಿಸರ್ಚ್ ಫೌಂಡೇಶನ್ ಒಡೆತನದ ಜಿ,ಕೆ. ಜನರಲ್ ಆಸ್ಪತ್ರೆಯಲ್ಲಿ 5 ತಿಂಗಳಲ್ಲಿ 111 ನವಜಾತ ಶಿಶುಗಳು ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದ್ದು, ಗುಜರಾತ್ ಸರಕಾರವು ಈ ಬಗ್ಗೆ ತನಿಖೆಗೆ ಆದೇಶಿಸಿದೆ.

ಆಸ್ಪತ್ರೆಯು ಬಿಡುಗಡೆಗೊಳಿಸಿರುವ ದಾಖಲೆಗಳ ಪ್ರಕಾರ 2018ರ ಮೊದಲ 5 ತಿಂಗಳಲ್ಲಿ 111 ನವಜಾತ ಶಿಶುಗಳು ಮೃತಪಟ್ಟಿವೆ ಎನ್ನಲಾಗಿದೆ. ತಡವಾದ ದಾಖಲಾತಿ ಅಥವಾ ಪೌಷ್ಠಿಕಾಂಶದ ಕೊರತೆಯಂತಹ ಕಾರಣಗಳನ್ನು ಆಸ್ಪತ್ರೆ ಆಡಳಿತ ಮಂಡಳಿ ನೀಡಿದ್ದು, ಈ ಬಗ್ಗೆ ತನಿಖೆ ನಡೆಸಲು ಸರಕಾರವು ತಜ್ಞರ ತಂಡವೊಂದನ್ನು ರಚಿಸಿದೆ.

“ಈ ಸಾವುಗಳ ಹಿಂದಿನ ಕಾರಣಗಳನ್ನು ಕಂಡುಕೊಳ್ಳಲು ನಾವು ತಂಡವೊಂದನ್ನು ರಚಿಸಿದ್ದೇವೆ. ತಂಡವು ತನ್ನ ವರದಿ ಸಲ್ಲಿಸಿದ ಬಳಿಕ ನಾವು ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ” ಎಂದು ಆರೋಗ್ಯಾಧಿಕಾರಿ ಜಯಂತಿ ರವಿ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News