ಜಯಲಲಿತಾರ ಕೊನೆಯ ಆಡಿಯೋ ಟೇಪ್ ಬಿಡುಗಡೆ ಮಾಡಿದ ವೈದ್ಯ

Update: 2018-05-27 09:04 GMT

ಚೆನ್ನೈ, ಮೇ 27: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಸಾವಿನ ಬಗ್ಗೆ ಅನುಮಾನಗಳಿರುವಂತೆಯೇ ವೈದ್ಯರೊಬ್ಬರು ಜಯಲಲಿತಾ ತಮ್ಮ ಜೊತೆ ಕೊನೆಯ ಬಾರಿ ಮಾತನಾಡಿರುವ ಆಡಿಯೋವನ್ನು ಬಿಡುಗಡೆಗೊಳಿಸಿದ್ದಾರೆ.

ಸುಮಾರು 75 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಜಯಲಲಿತಾ 2016ರ ಡಿಸೆಂಬರ್ ನಲ್ಲಿ ಮೃತಪಟ್ಟಿದ್ದರು. ಜಯಲಲಿತಾರ ಸಾವಿನ ಬಗ್ಗೆ ಅನುಮಾನಗಳಿವೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

1: 07 ನಿಮಿಷಗಳ ಈ ಆಡಿಯೋ ರೆಕಾರ್ಡಿಂಗ್ ನಲ್ಲಿ ಜಯಲಲಿತಾ ಕೆಮ್ಮುವುದು ಕೇಳಿಸುತ್ತದೆ. ತಾನು ಉಸಿರಾಡುವಾಗ ಕೇಳುವ ಶಬ್ಧವು ಸಿನೆಮಾ ಮಂದಿರಗಳಲ್ಲಿ ಅಭಿಮಾನಿಗಳು ಶಿಳ್ಳೆ ಹೊಡೆಯುವಂತಿದೆ ಎಂದು ಜಯಲಲಿತಾ ಹೇಳುವುದು ಕೇಳಿಸುತ್ತದೆ. ತನ್ನ ಉಸಿರಾಟವನ್ನು ರೆಕಾರ್ಡ್ ಮಾಡಲು ಮೊಬೈಲ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಲು ಸಾಧ್ಯವಾಗದಿದ್ದರೆ ‘ಅದನ್ನು ಬಿಟ್ಟು ಬಿಡುವಂತೆ’ ಜಯಲಲಿತಾ ತಮ್ಮನ್ನು ನೋಡಿಕೊಳ್ಳುತ್ತಿದ್ದ ವೈದ್ಯ ಡಾ.ಕೆ.ಎಸ್.ಶಿವಕುಮಾರ್ ರೊಂದಿಗೆ ಹೇಳುವುದು  ಈ ಆಡಿಯೋದಲ್ಲಿದೆ.

ಇನ್ನೊಂದು 33 ಸೆಕೆಂಡುಗಳ ಆಡಿಯೋ ಕ್ಲಿಪ್ ನಲ್ಲಿ, ತಾನು ಈಗ ಉಸಿರಾಟದ ಶಬ್ಧವನ್ನು ರೆಕಾರ್ಡ್ ಮಾಡುತ್ತಿದ್ದೇನೆ ಹಾಗು ಉಸಿರಾಟವು ತೀವ್ರವಾಗಿದೆ ಎಂದು ಡಾ. ಶಿವಕುಮಾರ್ ಜಯಲಲಿತಾರಲ್ಲಿ ಹೇಳುವುದು ಕೇಳಿಸುತ್ತದೆ. 2016ರ ಸೆಪ್ಟಂಬರ್ 27ರಂದು ರೆಕಾರ್ಡ್ ಮಾಡಲಾದ ಧ್ವನಿಯಿದು ಎಂದು ಡಾ.ಶಿವಕುಮಾರ್ ಜಸ್ಟೀಸ್ ಎ.ಆರುಮುಘಸ್ವಾಮಿ ವಿಚಾರಣಾ ಆಯೋಗಕ್ಕೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News