ದೇಶದ ಪ್ರಜೆಗಳ ಖಾತೆಗೆ 15 ಲಕ್ಷ ರೂ. ಜಮೆ ಮಾಡುವುದಾಗಿ ಪ್ರಧಾನಿ ಎಂದಿಗೂ ಹೇಳಿಲ್ಲ: ಬಿಜೆಪಿ ಶಾಸಕ
Update: 2018-05-27 22:22 IST
ಪುಣೆ, ಮೇ 27: ದೇಶದ ಪ್ರತಿಯೊಬ್ಬ ನಾಗರಿಕನ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಜಮೆ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಎಂದಿಗೂ ಹೇಳಿಲ್ಲ ಎಂದು ಮಹಾರಾಷ್ಟ್ರದ ಬಿಜೆಪಿ ಶಾಸಕ ಅಮರ್ ಸೇಬಲ್ ಹೇಳಿದ್ದಾರೆ.
ಈ ಬಗ್ಗೆ ವಿಪಕ್ಷಗಳು ತಪ್ಪು ಮಾಹಿತಿಯನ್ನು ಹರಡಿ ಜನರಲ್ಲಿ ಗೊಂದಲ ಹಾಗು ಭಿನ್ನಾಭಿಪ್ರಾಯಗಳನ್ನೇರ್ಪಡಿಸುತ್ತಿದೆ ಎಂದವರು ಆರೋಪಿಸಿದರು. ಎನ್ ಡಿಎ ಸರಕಾರದ ನಾಲ್ಕು ವರ್ಷಗಳ ಆಡಳಿತದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರ ಖಾತೆಗೆ 15 ಲಕ್ಷ ಜಮೆ ಮಾಡುವ ಭರವಸೆಯು ಬಿಜೆಪಿಯ ಪ್ರಣಾಳಿಕೆಯಲ್ಲಿರಲಿಲ್ಲ ಎಂದವರು ಹೇಳಿದರು.
“ದೇಶದ ಪ್ರಜೆಗಳ ಖಾತೆಗೆ 15 ಲಕ್ಷ ರೂ.ಗಳನ್ನು ಜಮೆ ಮಾಡುವುದಾಗಿ ಮೋದಿಜಿ ಎಂದಿಗೂ ಹೇಳಿಲ್ಲ. ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲೂ ಅದು ಇರಲಿಲ್ಲ” ಎಂದವರು ಹೇಳಿದರು.