ರೈಲ್ವೇ ಸ್ವಚ್ಛತಾ ಸಮೀಕ್ಷೆ: ರೈಲುಗಳ ಮಧ್ಯೆ ಸ್ವಚ್ಛತೆಗಾಗಿ ಪೈಪೋಟಿ

Update: 2018-05-27 17:45 GMT

ಹೊಸದಿಲ್ಲಿ, ಮೇ 27: ಇದೇ ಮೊದಲ ಬಾರಿಗೆ ರೈಲ್ವೇ ಇಲಾಕೆ ನಡೆಸುತ್ತಿರುವ ಸ್ವಚ್ಛತಾ ಸಮೀಕ್ಷೆಯ ಅಡಿಯಲ್ಲಿ ಅತ್ಯಂತ ಸ್ವಚ್ಛ ರೈಲು ಎಂಬ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಲು 200ಕ್ಕಿಂತಲೂ ಅಧಿಕ ರೈಲುಗಳು ಪರಸ್ಪರ ಪೈಪೋಟಿ ನಡೆಸುತ್ತಿವೆ. ಸರಕಾರದ ಸ್ವಚ್ಛ ಭಾರತ ಅಭಿಯಾನದ ಭಾಗವಾಗಿ 2016ರಲ್ಲಿ ದೇಶಾದ್ಯಂತ ಇರುವ ಎಲ್ಲ ರೈಲು ನಿಲ್ದಾಣಗಳಲ್ಲಿ ಇದೇ ಮಾದರಿಯ ಸಮೀಕ್ಷೆಯನ್ನು ನಡೆಸಲಾಗಿತ್ತು. ಪ್ರಮುಖ ರೈಲುಗಳಲ್ಲಿನ ಸ್ವಚ್ಛತೆಯ ಇಂಥ ಸ್ವತಂತ್ರ ಸಮೀಕ್ಷೆ ಪ್ರತಿ ವರ್ಷ ನಡೆಯಲಿದ್ದು ವಲಯ ರೈಲ್ವೇಗಳು ಮತ್ತು ನಿರ್ವಹಣಾ ಡಿಪೊಗಳಲ್ಲಿ ಸ್ಪರ್ಧಾತ್ಮಕ ಮತ್ತು ಹೆಮ್ಮೆಯ ಮನೋಭಾವವನ್ನು ಮೂಡಿಸುತ್ತದೆ. ರೈಲುಗಳ ಸಮೀಕ್ಷೆಯ ಕಾರ್ಯವು ಕೆಲವು ತಿಂಗಳಲ್ಲಿ ಮುಗಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಮೀಕ್ಷೆಯಲ್ಲಿ ರೈಲುಗಳ ಶೌಚಾಲಯಗಳು, ವಸ್ತುಗಳು, ಜನಬಲ, ದಾರಿ, ಕಸದಬುಟ್ಟಿ, ಕೀಟಗಳ ನಿಬಾಯಿಸುವಿಕೆ, ನೀರು, ತ್ಯಾಜ್ಯ ವಿಲೇವರಿ, ಸ್ವಚ್ಛತಾ ಸಿಬ್ಬಂದಿ ಮತ್ತು ನಿಲ್ದಾಣಕ್ಕೆ ತಲುಪುವ ಸಮಯ ಮುಂತಾದುವುಗಳ ಬಗ್ಗೆ ಗಮನವಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿಯೊಂದು ವಿಭಾಗಕ್ಕೂ ಅಂಕಗಳನ್ನು ನಿಗದಿಪಡಿಸಲಾಗಿದ್ದು ಶೌಚಾಲಯದ ಸ್ವಚ್ಛತೆಗೆ ಅತೀಹೆಚ್ಚು ಅಂಕಗಳನ್ನು ನಿಗದಿಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News