ಪೂರ್ವ ರಾಜ್ಯಗಳ ಒಂದು ಲೋಕಸಭಾ ಹಾಗೂ ಐದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಇಂದು
ಹೊಸದಿಲ್ಲಿ, ಮೇ 27: ಪೂರ್ವದ ರಾಜ್ಯಗಳಲ್ಲಿ ಒಂದು ಲೋಕಸಭಾ ಸ್ಥಾನಕ್ಕೆ ಹಾಗೂ ಐದು ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆಯು ಇಂದು ನಡೆಯಲಿದೆ. ಪಶ್ಚಿಮ ಬಂಗಾಳದ ಮಹೇಸ್ತಲ, ಜಾರ್ಖಂಡ್‌ನ ಗೊಮಿಯ ಮತ್ತು ಸಿಲ್ಲಿ, ಬಿಹಾರದ ಜೊಕಿಹಟ್ ಮತ್ತು ಮೇಘಾಲಯದ ಅಂಪಟಿಯ ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ. ಇನ್ನು ಸದ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ರಾಷ್ಟ್ರೀಯ ಪ್ರಜಾಸತಾತ್ಮಕ ಪ್ರಗತಿಪರ ಪಕ್ಷ (ಎನ್‌ಡಿಪಿಪಿ)ಯ ನಾಯಕ ನೆಫಿಯು ರಿಯೊ ಅವರಿಂದ ತೆರವಾಗಿರುವ ನಾಗಾಲ್ಯಾಂಡ್‌ನ ಒಂದು ಲೋಕಸಭಾ ಸ್ಥಾನಕ್ಕೂ ಇಂದು ಉಪಚುನಾವಣೆ ನಡೆಯಲಿದೆ. ಈ ಉಪಚುನಾವಣೆಯು ಕಾಂಗ್ರೆಸ್ ಬೆಂಬಲಿತ ನಾಗಾ ಪೀಪಲ್ಸ್ ಪಾರ್ಟಿ ಮತ್ತು ಆಡಳಿತಾರೂಡ ಪೀಪಲ್ಸ್ ಡೆಮಾಕ್ರಾಟಿಕ್ ಅಲಾಯನ್ಸ್ (ಪಿಡಿಎ)ಗೆ ಪ್ರತಿಷ್ಠೆಯ ಕಣವಾಗಿದೆ. ಎನ್‌ಡಿಪಿಪಿ ಮತ್ತು ಬಿಜೆಪಿ ಬೆಂಬಲಿತ ಪಿಡಿಎ ಮಾಜಿ ಸಚಿವ ಟೊಕೆಹೊ ಯೆಪ್ಟೊಮಿಯನ್ನು ಕಣಕ್ಕಿಳಿಸಿದ್ದರೆ ಕಾಂಗ್ರೆಸ್ ಬೆಂಬಲಿತ ಎನ್‌ಪಿಎಫ್ ಸಿ.ಅಪೊಕ್ ಜಮಿರ್‌ರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ.