×
Ad

ಮಂಗಳವಾರ ಭಾರೀ ಮಳೆಯಾಗುವ ಸಾಧ್ಯತೆ: ಕೇರಳ, ಕರ್ನಾಟಕ, ತಮಿಳುನಾಡು ಮೀನುಗಾರರಿಗೆ ಮುನ್ನೆಚ್ಚರಿಕೆ

Update: 2018-05-28 20:17 IST

ತಿರುವನಂತಪುರ, ಮೇ 28: ನೈಋತ್ಯ ಮನ್ಸೂನ್ ಸಾಮಾನ್ಯ ನಿಗದಿತ ದಿನಾಂಕ್ಕಿಂತ ಮೂರು ದಿನ ಮುನ್ನ ಅಂದರೆ ಮಂಗಳವಾರ ಕೇರಳಕ್ಕೆ ಆಗಮಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಂಗಳವಾರ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ಆದುದರಿಂದ ಮೀನುಗಾರರು ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಲಕ್ಷದ್ವೀಪ ಹಾಗೂ ಕೇರಳ ಕರ್ನಾಟಕ ಕರಾವಳಿಯ ಆಗ್ನೇಯ ಅರಬ್ಬಿ ಸಮುದ್ರದಲ್ಲಿ ಬಿರುಗಾಳಿಯಿಂದ ಕೂಡಿದ ಹವಾಮಾನ ಇರಲಿದೆ. ಕೇರಳ, ಕನಾಟಕ ಕರಾವಳಿಯಲ್ಲಿ ಹಾಗೂ ಲಕ್ಷದ್ವೀಪದಲ್ಲಿ ಪ್ರತಿ ಗಂಟೆಗೆ 40-50 ಕಿ.ಮೀ.ನಿಂದ 60 ಕಿ.ಮೀ. ವೇಗದಲ್ಲಿ ಚಂಡ ಮಾರುತ ಬೀಸಲಿದೆ.

 ಮಂಗಳವಾರ ಹಾಗೂ ಬುಧವಾರ ಕೇರಳ, ಕರ್ನಾಟಕ, ತಮಿಳುನಾಡು ಕರಾವಳಿ ಹಾಗೂ ಕಮೊರಿನ್‌ನಲ್ಲಿ ಸಮದ್ರಕ್ಕಿಳಿಯದಂತೆ ಮೀನುಗಾರರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಮೇ 29ರಿಂದ 31ರ ವರೆಗೆ ಲಕ್ಷದ್ವೀಪ ಹಾಗೂ ಕೇರಳದ ಹಲವು ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News