×
Ad

ಈ ಗ್ರಾಮದ ಪ್ರತಿ ಮನೆಯಲ್ಲೂ ಇದ್ದಾರೆ ಕ್ಯಾನ್ಸರ್ ರೋಗಿಗಳು !

Update: 2018-05-28 20:27 IST

ತೂತುಕುಡಿ, ಮೇ 28: ತೂತುಕುಡಿಯಲ್ಲಿರುವ ವೇದಾಂತ್ ಲಿಮಿಟೆಡ್‌ನ ತಾಮ್ರ ಕರಗಿಸುವ ಘಟಕ ಸ್ಟರ್ಲೈಟ್‌ನಿಂದ 3 ಕೀ. ಮೀ. ದೂರದಲ್ಲಿರುವ ಸಿಲ್ವರ್‌ಪುರಂ ಗ್ರಾಮದ ಪ್ರತಿ ಮನೆಯಲ್ಲಿ ಕಾನ್ಸರ್ ರೋಗಿಗಳು ಕಂಡು ಬಂದಿದ್ದಾರೆ.

ಸಿಲ್ವರ್‌ಪುರಂ ಗ್ರಾಮದ ಒಟ್ಟು ಜನಸಂಖ್ಯೆ 2000. ಇದರಲ್ಲಿ 60 ಮಂದಿ ಕ್ಯಾನ್ಸರ್ ಪೀಡಿತರಿದ್ದಾರೆ. ಇವರೆಲ್ಲರೂ ತಾವು ಕ್ಯಾನ್ಸರ್ ಪೀಡಿತರಾಗಲು ಸ್ಟರ್ಲೈಟ್ ತಾಮ್ರ ಘಟಕ ಕಾರಣ ಎಂದು ಆರೋಪಿಸುತ್ತಿದ್ದಾರೆ

ಕಲುಷಿತಗೊಂಡಿರುವ ಅಂತರ್ಜಲ ಸ್ಟರ್ಲೈಟ್ ತಾಮ್ರ ಘಟಕದ ಸಮೀಪದಲ್ಲಿರುವ 15 ಸ್ಥಳಗಳ ನೀರಿನ ಮಾದರಿಯನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಶೀಲನೆ ನಡೆಸಿತ್ತು. ಇಲ್ಲಿನ ನೀರಿನಲ್ಲಿ ಸುರಕ್ಷಿತ ಮಟ್ಟಕ್ಕಿಂತ 39ರಿಂದ 55 ಪಟ್ಟು ಹೆಚ್ಚು ನ್ಯೂರೋಟೋಕ್ಸಿನ್‌ನಂತಹ ಸೀಸದ ಅಂಶವನ್ನು ಮಂಡಳಿ ಕಂಡು ಕೊಂಡಿದೆ. ದ್ರವ ತ್ಯಾಜ್ಯ, ತಾಮ್ರದ ತ್ಯಾಜ್ಯ, ಜಿಪ್ಸಂ ಅನ್ನು ಕಳೆದ ಎರಡು ದಶಕಗಳಿಂದ ಈ ಪ್ರದೇಶದಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಇದು ಸಿಲ್ವರ್‌ಪುರಂನ ಅಂತರ್ಜಲ ಸರಿಪಡಿಸಲು ಸಾಧ್ಯವಾಗದ ರೀತಿಯಲ್ಲಿ ಕಲುಷಿತಗೊಳಿಸಿದೆ. ನೀರು ಬಳಸಲು ಸಾಧ್ಯವಾಗದೇ ಇರುವುದರಿಂದ ಇಲ್ಲಿನ ಹಲವು ನೀರಿನ ಮೂಲಗಳು ಹಾಗೂ ಬೋರ್ ವೇಲ್‌ಗಳು ನಿರುಪಯೋಗಿಯಾಗಿವೆ ಎಂದು ಮೂಲಗಳು ತಿಳಿಸಿವೆ.

ಸ್ಟರ್ಲೈಟ್‌ನಿಂದ ಪರಿಸರ ನಿಯಮ ಉಲ್ಲಂಘನೆ ಸ್ಟರ್ಲೈಟ್ ಪರಿಸರ ನಿಯಮವನ್ನು ವ್ಯಾಪಕವಾಗಿ ಉಲ್ಲಂಘಿಸುತ್ತಿದೆ. ಇದು ಕೆಂಪು ಅಪಾಯಕಾರಿ ಭಾರಿ ಕಾರ್ಖಾನೆಗಳ ವರ್ಗದಲ್ಲಿ ಸೇರಿ ಹೋಗಿದೆ. ಇದರ ಅರ್ಥ ಇಂತಹ ಘಟಕಗಳು ಮನುಷ್ಯರು ವಾಸವಿರುವ ಸಮೀಪ ಇರಬಾರದು. ಆದರೆ, ಇದು ತೂತುಕುಡಿ ಗಡಿಯಿಂದ ಕೇವಲ 1.5 ಕಿ.ಮೀ. ದೂರದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News