ಪೆಟ್ರೋಲ್, ಡೀಸೆಲ್ ಬೆಲೆ ಕಡಿತಗೊಳಿಸಿದ ಕೇರಳ ಸರಕಾರ

Update: 2018-05-30 11:06 GMT

ಹೊಸದಿಲ್ಲಿ, ಮೇ 30: ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆ ಬಗ್ಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ನಡುವೆಯೇ  ಕೇರಳ ಸರಕಾರವು ಪೆಟ್ರೋಲ್ ಹಾಗು ಡೀಸೆಲ್ ಬೆಲೆಯನ್ನು ಲೀಟರ್ ಒಂದಕ್ಕೆ ಒಂದು ರೂ. ಕಡಿತಗೊಳಿಸಲು ನಿರ್ಧರಿಸಿದೆ.

ಜೂನ್ 1ರಿಂದ ಗ್ರಾಹಕರಿಗೆ ದರ ಕಡಿತದ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. “ನಮ್ಮ ರಾಜ್ಯದ ಆರ್ಥಿಕ ಸ್ಥಿತಿಗತಿ ಚೆನ್ನಾಗಿಲ್ಲ. ಆದರೆ ನಮ್ಮ ಸರಕಾರವು ಪೆಟ್ರೋಲ್, ಡೀಸೆಲ್ ಬೆಲೆ ಲೀಟರೊಂದಕ್ಕೆ 1 ರೂ. ಕಡಿತಗೊಳ್ಳುವಂತೆ ಇಂಧನದ ಮೇಲಿನ ವ್ಯಾಟ್ ಕಡಿತಗೊಳಿಸಲು ನಿರ್ಧರಿಸಿದೆ. ಇದರಿಂದಾಗಿ ವಾರ್ಷಿಕ 509 ಕೋಟಿ ರೂ. ನಷ್ಟವಾಗಲಿದೆ. ಇದು ಕೇಂದ್ರಕ್ಕೆ ನಮ್ಮ ಸಂದೇಶವಾಗಿದೆ. ತೈಲ ಬೆಲೆ ಈ ಮಟ್ಟದಲ್ಲಿ ಹೆಚ್ಚಳವಾಗಬಾರದು” ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News