ತೈಲ ಬೆಲೆ ಏರಿಕೆಯಿಂದ ಭಾರತದ ಪ್ರಗತಿದರ ಕುಸಿತದ ಸಾಧ್ಯತೆ; ಮೂಡೀಸ್

Update: 2018-05-30 14:25 GMT

ಹೊಸದಿಲ್ಲಿ, ಮೇ 30: ಹೆಚ್ಚುತ್ತಿರುವ ತೈಲ ಬೆಲೆ ಹಾಗೂ ಬಿಗುವಿನ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ 2018ರಲ್ಲಿ ಭಾರತದ ಪ್ರಗತಿದರ ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆಯಾಗಲಿದೆ ಎಂದು ಮೂಡಿಸ್ ಇನ್‍ವೆಸ್ಟರ್ ಸರ್ವೀಸ್ ಅಂದಾಜು ಮಾಡಲಾಗಿದೆ. ಹಿಂದೆ ಇದ್ದ 7.5 ಶೇಕಡ ನಿರೀಕ್ಷಿತ ಅಭಿವೃದ್ಧಿ ದರದ ಬದಲಾಗಿ ಭಾರತದ ಪ್ರಗತಿ ದರ 7.3ರಷ್ಟಾಗಲಿದೆ ಎಂದು ಅದು ಹೇಳಿದೆ. ಆದರೆ 2019ರ ಪ್ರಗತಿದರ 7.5 ಎನ್ನುವ ನಿರೀಕ್ಷೆಯಲ್ಲಿ ಯಾವ ಬದಲಾವಣೆಯನ್ನೂ ಮಾಡಿಲ್ಲ.

"ಭಾರತದ ಆರ್ಥಿಕತೆ  ಹೂಡಿಕೆ ಹಾಗೂ ಬಳಕೆ ಹೆಚ್ಚಳದಿಂದಾಗಿ ಪುನಶ್ಚೇತನದ ಹಾದಿಯಲ್ಲಿದೆ. ಆದಾಗ್ಯೂ ಅಧಿಕ ತೈಲ ಬೆಲೆ ಮತ್ತು ಬಿಗುವಿನ ಹಣಕಾಸು ಸ್ಥಿತಿಯಿಂದಾಗಿ ಪ್ರಗತಿದರದ ಮೇಲೆ ಪರಿಣಾಮವಾಗಲಿದೆ. 2018ರಲ್ಲಿ ಶೇಕಡ 7.3ರಷ್ಟು ಪ್ರಗತಿ ನಿರೀಕ್ಷಿಸಬಹುದಾಗಿದ್ದು, ಹಿಂದಿನ ಅಂದಾಜು ಆದ 7.5ಕ್ಕಿಂತ ಇದು ಕಡಿಮೆ" ಎಂದು ಗ್ಲೋಬಲ್ ಮ್ಯಾಕ್ರೊ ಔಟ್‍ಲುಕ್: 2018-19ರಲ್ಲಿ ಸ್ಪಷ್ಟಪಡಿಸಿದೆ.

"ಜಾಗತಿಕ ಪ್ರಗತಿ 2018ರ ಕೊನೆ ಹಾಗೂ 2019ರಲ್ಲಿ ಮಂದಗತಿಗೆ ತಲುಪಲಿದೆ. ಮುಂದುವರಿದ ಆರ್ಥಿಕತೆಗಳು ಸಂಪೂರ್ಣ ಉದ್ಯೋಗದ ಸ್ಥಿತಿ ತಲುಪುವುದು, ಸಾಲದ ವೆಚ್ಚ ಅಧಿಕವಾಗುವುದು ಹಾಗೂ ಬಿಗಿ ಸಾಲ ಸ್ಥಿತಿಗತಿಗಳು ವೇಗವರ್ಧನೆಗೆ ತಡೆಯಾಗಲಿವೆ” ಎಂದು ಮೂಡೀಸ್ ಅಂದಾಜಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News