×
Ad

ಇಂಡೊನೇಶಿಯಾ ಚರ್ಚ್‌ಗಳ ಮೇಲೆ ಉಗ್ರರ ದಾಳಿ: ಪ್ರಧಾನಿ ಮೋದಿ ಖಂಡನೆ

Update: 2018-05-30 21:48 IST

ಜಕಾರ್ತ, ಮೇ 30: ಇಂಡೊನೇಶಿಯದ್ದ ಮೂರು ಚರ್ಚ್‌ಗಳ ಮೇಲೆ ಇತ್ತೀಚೆಗೆ ನಡೆದ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಪ್ರಧಾನಿ ಮೋದಿ ಭಯೋತ್ಪಾದನೆಯ ವಿರುದ್ಧ ಹೋರಾಟದಲ್ಲಿ ಭಾರತವು ಇಂಡೊ ನೇಶಿಯದ ಜೊತೆ ದೃಢವಾಗಿ ನಿಲ್ಲುತ್ತದೆ ಎಂದು ಬುಧವಾರ ತಿಳಿಸಿದ್ದಾರೆ.

“ಗೆಳೆಯರೇ, ಇಂಡೊನೇಶಿಯದಲ್ಲಿ ಇತ್ತೀಚೆಗೆ ನಡೆದ ಉಗ್ರರ ದಾಳಿಯಲ್ಲಿ ಮುಗ್ಧ ನಾಗರಿಕರ ಸಾವಿನ ಬಗ್ಗೆ ತಿಳಿದು ದುಃಖವಾಗಿದೆ. ಈ ಕೃತ್ಯವನ್ನು ಭಾರತವು ಬಲವಾಗಿ ಖಂಡಿಸುತ್ತದೆ ಮತ್ತು ಇಂಥ ಸಮಯದಲ್ಲಿ ನಾವು ನಿಮ್ಮೊಂದಿಗಿದ್ದೇವೆ ಎಂದು ಹೇಳಲು ಬಯಸುತ್ತೇವೆ” ಎಂದು ತಿಳಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ಸುರಬಯದಲ್ಲಿರುವ ಮೂರು ಚರ್ಚ್‌ಗಳ ಮೇಲೆ ಆತ್ಮಹತ್ಯಾ ದಾಳಿಕೋರರು ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಕನಿಷ್ಟ ಏಳು ಮಂದಿ ಸಾವನ್ನಪ್ಪಿದರೆ ನಲ್ವತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. 18 ವರ್ಷಗಳಲ್ಲೆ ಅತ್ಯಂತ ಭೀಕರ ಬಾಂಬ್ ದಾಳಿ ಇದಾಗಿದೆ ಎಂದು ಜಕಾರ್ತದ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News