×
Ad

ಏಳು ಪಕ್ಷಗಳಿಗೆ 589 ಕೋಟಿ ರೂ. ದೇಣಿಗೆ: ಬಿಜೆಪಿಯ ಪಾಲು 532 ಕೋಟಿ ರೂ.; ವರದಿ

Update: 2018-05-31 19:07 IST

ಹೊಸದಿಲ್ಲಿ, ಮೇ 31: 2016-17ನೇ ಸಾಲಿನಲ್ಲಿ ದೇಶದ ಪ್ರಮುಖ ಏಳು ಪಕ್ಷಗಳು ಅನಾಮಧೇಯ ಮೂಲಗಳಿಂದ 710.80 ಕೋಟಿ ರೂ. ಆದಾಯ ಗಳಿಸಿವೆ ಎಂದು ಪ್ರಜಾಸತಾತ್ಮಕ ಸುಧಾರಣೆಗಳ ಸಂಸ್ಥೆ (ಎಡಿಆರ್) ವರದಿ ತಿಳಿಸಿದೆ.

ಈ ಪೈಕಿ 589.38 ಕೋಟಿ ರೂ. ದೇಣಿಗೆಯ ರೂಪದಲ್ಲಿ ಬಂದಿದ್ದರೆ ಬಿಜೆಪಿಯೊಂದೇ 1,194 ಸಂಸ್ಥೆಗಳಿಂದ 532.27 ಕೋಟಿ ರೂ. ದೇಣಿಗೆ ಪಡೆದುಕೊಂಡಿದೆ ಎಂದು ವರದಿ ತಿಳಿಸಿದೆ. ಬಿಜೆಪಿ ಘೋಷಿಸಿದ ದೇಣಿಗೆಯ ಪ್ರಮಾಣವು ಇತರ ಪಕ್ಷಗಳಾದ ಕಾಂಗ್ರೆಸ್, ರಾಷ್ಟ್ರೀಯವಾದಿ ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷ, ಸಿಪಿಐ(ಎಂ) ಮತ್ತು ತೃಣಮೂಲ ಕಾಂಗ್ರೆಸ್ ಘೋಷಿಸಿದ ದೇಣಿಗೆಗಿಂತ ಒಂಬತ್ತು ಪಟ್ಟು ಹೆಚ್ಚು ಎಂದು ವರದಿ ತಿಳಿಸಿದೆ.

2016-17ರಲ್ಲಿ ನಾವು 20,000 ರೂ.ಗಿಂತ ಹೆಚ್ಚಿನ ದೇಣಿಗೆಯನ್ನು ಪಡೆದುಕೊಂಡಿಲ್ಲ ಎಂದು ಬಹುಜನ ಸಮಾಜ ಪಕ್ಷ ತಿಳಿಸಿದೆ. 2016-17ನೇ ಸಾಲಿನಲ್ಲಿ ರಾಷ್ಟ್ರೀಯ ಪಕ್ಷಗಳು ಪಡೆದುಕೊಂಡಿರುವ ದೇಣಿಗೆ 487.36 ಕೋಟಿ ರೂ. ಹೆಚ್ಚಾಗಿದೆ. 2015-16ನೇ ಸಾಲಿನಲ್ಲಿ ಇದೇ ವೇಳೆಯಲ್ಲಿ ಎಲ್ಲ ಪಕ್ಷಗಳು ಪಡೆದುಕೊಂಡ ದೇಣಿಗೆ 102.02 ಕೋಟಿ ರೂ. ಆಗಿತ್ತು. 2015-16ರಲ್ಲಿ ಬಿಜೆಪಿ 76.85 ಕೋಟಿ ರೂ. ದೇಣಿಗೆ ಪಡೆದುಕೊಂಡಿದ್ದರೆ 2016-17ನೇ ಸಾಲಿನಲ್ಲಿ ಈ ಪ್ರಮಾಣ 532.27 ಕೋಟಿ ರೂ.ಗೆ ತಲುಪಿದೆ.

ಇದೇ ವೇಳೆ ಎನ್‌ಸಿಪಿ ಪಡೆದುಕೊಂಡ ದೇಣಿಗೆ 2015-16ರಲ್ಲಿ 71 ಲಕ್ಷ ರೂ.ನಿಂದ 2016-17ರ ವೇಳೆಗೆ 6.34 ಕೋಟಿ ರೂ.ಗೆ ತಲುಪಿತ್ತು. 2016-17ರಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ದೇಣಿಗೆ ಪ್ರಮಾಣ ಶೇ. 231 ಹೆಚ್ಚಾಗಿದ್ದರೆ ಸಿಪಿಎಂ ದೇಣಿಗೆಯಲ್ಲಿ ಶೇ.190 ಮತ್ತು ಕಾಂಗ್ರೆಸ್ ಪಡೆದುಕೊಂಡ ದೇಣಿಗೆಯಲ್ಲಿ ಶೇ.105 ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News