ದೇಶ ಒಡೆಯುವವರಿಗೆ ಉತ್ತರ ಪ್ರದೇಶದ ಜನರು ತಕ್ಕ ಪಾಠ ಕಲಿಸಿದ್ದಾರೆ: ಅಖಿಲೇಶ್ ಯಾದವ್
Update: 2018-05-31 19:32 IST
ಲಕ್ನೋ, ಮೇ 31: ಕೈರಾನ ಉಪಚುನಾವಣೆಯಲ್ಲಿ ಬಿಜೆಪಿ ಸೋಲಿನ ಬಗ್ಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, “ಇದು ಪ್ರಜಾಪ್ರಭುತ್ವವನ್ನು ನಂಬದವರ ಸೋಲು ಎಂದಿದ್ದಾರೆ. ‘ಇದು ರೈತರ, ನಿರ್ಲಕ್ಷಿತರ, ಬಡವರ ಹಾಗು ದಲಿತರ ಗೆಲುವು’ ಎಂದ ಅವರು, ಉತ್ತರ ಪ್ರದೇಶದ ಜನರು ಬಿಜೆಪಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದಿದ್ದಾರೆ.
“ರೈತರು, ದಲಿತರು ಸೇರಿದಂತೆ ಎಲ್ಲಾ ಜನರನ್ನು ಅಭಿನಂದಿಸಲು ನಾನು ಇಚ್ಛಿಸುತ್ತೇನೆ. ದೇಶವನ್ನು ಒಡೆಯಲು ಯತ್ನಿಸುತ್ತಿರುವವರಿಗೆ ಸೂಕ್ತ ಉತ್ತರ ಲಭಿಸಿದೆ” ಎಂದವರು ಹೇಳಿದರು.
“ತಮಗೆ ದ್ರೋಹ ಎಸಗಿದ್ದಕ್ಕಾಗಿ ರಾಜ್ಯದ ಜನರು ತಕ್ಕ ಪಾಠ ಕಲಿಸಿದ್ದಾರೆ. ಉತ್ತರ ಪ್ರದೇಶ ಸರಕಾರವು ಜನರನ್ನು ನಿರಂತರವಾಗಿ ಮೂರ್ಖರನ್ನಾಗಿಸುತ್ತಿತ್ತು. ಸಾಲಮನ್ನಾ ಆಗುತ್ತದೆ ಎಂದು ಜನರಿಗೆ ಹೇಳಲಾಯಿತು. ಆದರೆ ಜನರು ಪ್ರಾಣವನ್ನು ಕಳೆದುಕೊಂಡರು” ಎಂದವರು ಹೇಳಿದರು.