×
Ad

ಗೂಗಲ್ ಪ್ಲೇ ಸ್ಟೋರ್‌ನಿಂದ ಮಾಯವಾದ ಪತಂಜಲಿಯ ಮೆಸೇಜಿಂಗ್ ಆ್ಯಪ್ !

Update: 2018-05-31 20:33 IST

ಹೊಸದಿಲ್ಲಿ, ಮೇ 31: ಯೋಗ ಗುರು ರಾಮ್‌ದೇವ್ ವ್ಯಾಟ್ಸ್ ಆ್ಯಪ್ ಹಾಗೂ ವಿ-ಚಾಟ್‌ಗೆ ಸೆಡ್ಡು ಹೊಡೆಯಲು ರೂಪಿಸಿದ್ದ ಸ್ವದೇಶಿ ಸಂದೇಶ ರವಾನೆ ಆ್ಯಪ್ ‘ಕಿಂಭೊ’ ಗೂಗಲ್ ಪ್ಲೇ ಸ್ಟೋರ್‌ನಿಂದ ನಾಪತ್ತೆಯಾಗಿದೆ. ಐಫೋನ್, ಐಪ್ಯಾಡ್‌ಗಳ ಈ ಆ್ಯಪ್ ಆ್ಯಪ್ ಸ್ಟೋರ್‌ನಲ್ಲಿ ಇದುವರೆಗೆ ಲಭ್ಯವಾಗುತ್ತಿತ್ತು. ಆದರೆ, ಹಲವರು ಈ ಆ್ಯಪ್‌ಗಳನ್ನು ಪ್ಲೇಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಪ್ರಯತ್ನಿಸಿದಾಗ ನಾಪತ್ತೆಯಾಗಿದೆ.

ಕಿಂಭೊ ಸಂಸ್ಕೃತ ಪದ “ಹೇಗಿದ್ದೀರಿ? ಹೊಸತೇನಿದೆ?” ಎಂಬುದು ಇದರ ಅರ್ಥ ಎಂದು ಪತಂಜಲಿ ವಕ್ತಾರ ಎಸ್.ಕೆ. ತಿಜರ್‌ವಾಲಾ ಹೇಳಿದ್ದರು. ‘‘ಇನ್ನು ಮುಂದೆ ಭಾರತ ಮಾತನಾಡಲಿದೆ.’’ ಎಂದು ತಿಜರ್‌ವಾಲಾ ಬುಧವಾರ ಟ್ವೀಟ್‌ನಲ್ಲಿ ಹೇಳಿದ್ದಾರೆ. ‘‘ಇನ್ನು ವ್ಯಾಟ್ಸ್ ಆ್ಯಪ್ ಪೈಪೋಟಿ ನೀಡುತ್ತದೆ. ನಮ್ಮ ಸ್ವಂತ ಸ್ವದೇಶಿ ಮೆಸೇಜಿಂಗ್ ಫ್ಲಾಟ್‌ಫಾರ್ಮ್. ಗೂಗಲ್ ಪ್ಲೇ ಸ್ಟೋರ್‌ನಿಂದ ನೇರವಾಗಿ ಡೌನ್‌ಲೋಡ್ ಮಾಡಿಕೊಳ್ಳಿ.’’ ಎಂದು ಅವರು ಹೇಳಿದ್ದಾರೆ. ವ್ಯಾಟ್ಸ್ ಆ್ಯಪ್ ಸ್ಥಾಪಿಸಿದ ಪ್ರಭುತ್ವದಲ್ಲಿ ಕೇವಲ ಸ್ವದೇಶಿ ಎನ್ನುವ

ಕಾರಣಕ್ಕೆ ‘ಕಿಂಭೊ’ ಅವಕಾಶ ಸೃಷ್ಟಿಸುತ್ತಿರಲಿಲ್ಲ ಎಂದು ಸೈಬರ್ ಮೀಡಿಯಾ ರಿಸರ್ಚ್‌ನ ‘ನೂತನ ಉಪಕ್ರಮಗಳ’ ಮುಖ್ಯಸ್ಥ ಫೈಸಲ್ ಕವೂಸಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News