ಅಶಕ್ತ ಭವಿಷ್ಯ ನಿಧಿ ಪಿಂಚಣಿದಾರರಿಗೆ ಸೂಚನೆ

Update: 2018-06-02 08:21 GMT

ಮಂಗಳೂರು, ಜೂ. 2: ಅಶಕ್ತ ಭವಿಷ್ಯ ನಿಧಿ ಪಿಂಚಣಿದಾರರಿ ಭವಿಷ್ಯ ನಿಧಿ ಯೋಜನೆ 1995ರ ಅಡಿಯಲ್ಲಿ 2017ರಂದು ಸಲ್ಲಿಸಬೇಕಾಗಿದ್ದ ಡಿಜಿಟಲ್ ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಸಲು ಬಾಕಿ ಇರುವ ಮಾಸಿಕ ಪಿಂಚಣಿದಾರರು. ಪಿಂಚಣಿ ಪಡೆಯುವ ಬ್ಯಾಂಕ್ ಶಾಖೆಗೆ ಅಥವಾ ಭವಿಷ್ಯ ನಿಧಿ ಕಚೇರಿಗೆ ಬಂದು ಜೀವಿತ ಪ್ರಮಾಣ ಪತ್ರ ದಾಖಲಿಸಲು ಅಶಕ್ತರಾಗಿದ್ದಲ್ಲಿ ಅಂತಹ ಪಿಂಚಣಿದಾರರ ನಿವಾಸಕ್ಕೆ ತೆರಳಿ ಈ ಸೌಲಭ್ಯ ಕಲ್ಪಿಸಲು ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಯ ಆಯುಕ್ತರು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಈ ಸೌಲಭ್ಯ ಪಡೆಯಲು ಇಚ್ಚಿಸುವ ಅಶಕ್ತ ಪಿಂಚಣಿದಾರರು ಅವರ ಪ್ರತಿನಿಧಿಗಳ ಮೂಲಕ ಕಚೇರಿಯನ್ನು ಸಂಪರ್ಕಿಸಿ ಪಿಂಚಣಿದಾರರ ಹೆಸರು, ವಾಸವಿರುವ ಸ್ಥಳದ ಈಗಿನ ವಿಳಾಸ, ಪಿಂಚಣಿ ವಿತರಣೆಯ ಆದೇಶ ಸಂಖ್ಯೆ, ಬ್ಯಾಂಕ್ ಮಾಹಿತಿ ಹಾಗೂ ದೂರವಾಣಿ ಅಥವಾ ಮೊಬೈಲ್ ಸಂಖ್ಯೆ ಕಚೇರಿಗೆ ಸಲ್ಲಿಸಿ ಜೀವಿತ ಪ್ರಮಾಣ ಪತ್ರ ದಾಖಲಾತಿ ಸೌಲಭ್ಯ ಪಡೆಯಲು ನಿವೇದನಾ ಪತ್ರದೊಂದಿಗೆ ದಾಖಲಾತಿಗೆ ಕೋರಲಾಗಿದೆ ಎಂದು ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News