×
Ad

ಧೂಳಿನ ಬಿರುಗಾಳಿ: ಪಶ್ಚಿಮ ಉತ್ತರಪ್ರದೇಶದಲ್ಲಿ 17 ಮಂದಿ ಬಲಿ

Update: 2018-06-02 14:48 IST

ಲಕ್ನೊ, ಜೂ.2: ಪಶ್ಚಿಮ ಉತ್ತರಪ್ರದೇಶದಲ್ಲಿ ಶುಕ್ರವಾರ ಸಂಜೆ ಬೀಸಿದ ಧೂಳಿನ ಬಿರುಗಾಳಿಯಲ್ಲಿ ಕನಿಷ್ಠ 17 ಮಂದಿ ಬಲಿಯಾಗಿದ್ದಾರೆ.

ಮುರದಾಬಾದ್‌ನಲ್ಲಿ ಗರಿಷ್ಠ ಸಂಖ್ಯೆಯ(7) ಸಾವು ಸಂಭವಿಸಿದೆ. ಮುಝಫ್ಫರ್‌ನಗರ ಹಾಗೂ ಮೀರತ್‌ನಲ್ಲಿ ತಲಾ ಇಬ್ಬರು ಸಾವನ್ನಪ್ಪಿದ್ದಾರೆ. ಮೂವರು ವ್ಯಕ್ತಿಗಳು ಸಂಭಾಲ್ ಹಾಗೂ ಇಬ್ಬರು ಬದೌನ್‌ನಲ್ಲಿ ಮೃತಪಟ್ಟಿದ್ದಾರೆ.

ಎಲ್ಲ 17 ಮಂದಿ ಮರ ಅಥವಾ ಮನೆ ಕುಸಿತದಿಂದ ಮೃತಪಟ್ಟಿದ್ದಾರೆ ಎಂದು ಪರಿಹಾರ ಸಮಿತಿಯ ಆಯುಕ್ತ ಸಂಜಯ್ ಕುಮಾರ್ ಹೇಳಿದ್ದಾರೆ.

 ಉತ್ತಪ್ರದೇಶದಲ್ಲಿ ಈ ವರ್ಷದ ಮೇ 1 ರಿಂದ ಧೂಳಿನ ಬಿರುಗಾಳಿಗೆ ಸುಮಾರು 150 ಮಂದಿ ಸಾವನ್ನಪ್ಪಿದ್ದಾರೆ. ಕೆಲವರು ಸಿಡಿಲು ಬಡಿದು ಸಾವನ್ನಪ್ಪಿದ್ದರೆ, ಇನ್ನೂ ಕೆಲವರು ಗೋಡೆ ಅಥವಾ ಮರ ಬಿದ್ದು ಸತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News