ಆದಿತ್ಯನಾಥ್ ಗೆ ಕಪ್ಪು ಬಾವುಟ ತೋರಿಸಿದ್ದ 10 ಜನರ ಸೆರೆ
Update: 2018-06-02 19:24 IST
ಇಟಾವಾ,ಜೂ.2: ಮುಖ್ಯಮಂತ್ರಿ ಆದಿತ್ಯನಾಥ್ ಅವರು ಶುಕ್ರವಾರ ಇಲ್ಲಿಗೆ ಭೇಟಿ ನೀಡಿದ್ದ ಸಂದರ್ಭ ಕಛವುರಾ ಕ್ರಾಸಿಂಗ್ ಬಳಿ ಅವರತ್ತ ಕಪ್ಪು ಬಾವುಟಗಳನ್ನು ಪ್ರದರ್ಶಿಸಿದ್ದಕ್ಕಾಗಿ 10 ಜನರನ್ನು ಬಂಧಿಸಿರುವುದಾಗಿ ಪೊಲೀಸರು ಶನಿವಾರ ತಿಳಿಸಿದರು.
ಬಂಧಿತರ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು,ಶುಕ್ರವಾರ ತಡರಾತ್ರಿ ವೈಯುಕ್ತಿಕ ಭದ್ರತೆಯ ಆಧಾರದಲ್ಲಿ ಅವರನ್ನು ಬಿಡುಗಡೆಗೊಳಿಸಲಾಗಿದೆ ಎಂದು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಂಜನಿ ಕುಮಾರ್ ಅವರು ಸುದ್ದಿಗಾರರಿಗೆ ತಿಳಿಸಿದರು.