ಹಿ.ಪ್ರ:ಜಪಾನಿ ಮಹಿಳೆಯ ಮೇಲೆ ಟ್ಯಾಕ್ಸಿ ಚಾಲಕನಿಂದ ಅತ್ಯಾಚಾರ

Update: 2018-06-02 13:55 GMT

ಕುಲು,ಜೂ.2: ಟ್ಯಾಕ್ಸಿ ಚಾಲಕನೋರ್ವ ಜಪಾನಿ ಮಹಿಳೆಯ ಮೇಲೆ ಅತ್ಯಾಚಾರ ವೆಸಗಿದ ಹೇಯ ಘಟನೆ ಶುಕ್ರವಾರ ಇಲ್ಲಿ ನಡೆದಿದೆ.

ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು,ಸಂತ್ರಸ್ತ ಮಹಿಳೆಯು ನೀಡಿದ್ದ ಸುಳಿವುಗಳ ಆಧಾರದಲ್ಲಿ ಓರ್ವನನ್ನು ಬಂಧಿಸಲಾಗಿದೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಕುಲು ಎಸ್‌ಪಿ ಶಾಲಿನಿ ಅಗ್ನಿಹೋತ್ರಿ ಅವರು ತಿಳಿಸಿದರು.

ಸಂತ್ರಸ್ತೆಯ ದೂರಿನಂತೆ ಟ್ಯಾಕ್ಸಿ ಚಾಲಕ ಆರೋಪಿಯಾಗಿದ್ದು,ಮುಂದಿನ ತನಿಖೆ ನಡೆಯುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News