ನಿಪಾಹ್‌ಗೆ ಮಹಿಳೆ ಬಲಿ

Update: 2018-06-02 16:15 GMT

ಕೋಝಿಕೋಡ್, ಜೂ. 2: ನಿಪಾಹ್ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ನಿಗಾದಲ್ಲಿ ಇದ್ದ 39 ವರ್ಷದ ಮಹಿಳೆ ಶನಿವಾರ ಮೃತಪಟ್ಟಿದ್ದಾರೆ.

ಆದಾಗ್ಯೂ ಮಹಿಳೆಯ ದೇಹ ದ್ರವದ ಮಾದರಿ ನೆಗೆಟಿವ್ ಎಂದು ಬಂದಿದೆ ಎಂದು ಕೇರಳದ ಆರೋಗ್ಯ ಸಚಿವ ಕೆ.ಕೆ. ಶೈಲಜಾ ಸುದ್ದಿಗಾರರಿಗೆ ತಿಳಿಸಿದ್ದಾರೆ. ಅವರ ಸಾವಿನ ಕಾರಣದ ಬಗ್ಗೆ ಇನ್ನಷ್ಟೇ ದೃಢೀಕರಿಸಬೇಕಿದೆ ಎಂದು ಅವರು ಹೇಳಿದ್ದಾರೆ.

ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಿಪಾಹ್‌ ವೈರಸ್ ಸೋಂಕಿಗೊಳಗಾದ ವ್ಯಕ್ತಿ ಜೊತೆಯಲ್ಲಿ ಈ ಮಹಿಳೆ ಇದ್ದರು. ಮಹಿಳೆ ಅನಾರೋಗ್ಯಕ್ಕೆ ತುತ್ತಾದ ಬಳಿಕ ಅವರನ್ನು ಕೋಝಿಕೋಡ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು ಎಂದು ಆರೋಗ್ಯ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ. ಆರೋಗ್ಯ ಸ್ಥಿತಿಯ ಬಗ್ಗೆ ನಿಗಾ ಇರಿಸುವ ಹಿನ್ನೆಲೆಯಲ್ಲಿ ನಿಪಾಹ್ ಸೋಂಕಿತ ವ್ಯಕ್ತಿಗಳೊಂದಿಗೆ ಸಂಪರ್ಕ ಇರಿಸಿಕೊಂಡ 1949 ಜನರ ಪಟ್ಟಿಯನ್ನು ಆರೋಗ್ಯ ಅಧಿಕಾರಿಗಳು ರೂಪಿಸಿದ್ದರು. ಈ ಮಹಿಳೆ ಕೂಡ ಪಟ್ಟಿಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News