ನಾರದ ಮುನಿ ವಿಶ್ವದ 'ಪ್ರಪ್ರಥಮ ಪತ್ರಕರ್ತ' ಎಂದ ಆರೆಸ್ಸೆಸ್ ನಾಯಕ!
Update: 2018-06-03 18:15 IST
ಹೊಸದಿಲ್ಲಿ, ಜೂ 3: ಕುರುಕ್ಷೇತ್ರ ಯುದ್ಧದ ಬಗ್ಗೆ ಸಂಜಯ ತಕ್ಷಣದ ಮಾಹಿತಿ ನೀಡುತ್ತಿದ್ದ. ಇದು ಪ್ರಾಚೀನ ಭಾರತದಲ್ಲೇ ಪತ್ರಿಕೋದ್ಯಮ ಇತ್ತು ಎನ್ನುವುದನ್ನು ಸೂಚಿಸುತ್ತದೆ ಎಂದು ಉತ್ತರಪ್ರದೇಶದ ಉಪಮುಖ್ಯಮಂತ್ರಿ ಹೇಳಿಕೆ ಕೆಲ ದಿನಗಳಲ್ಲೇ “ನಾರದ ಮುನಿ ಪ್ರಪ್ರಥಮ ಪತ್ರಕರ್ತ” ಎಂದು ಆರೆಸ್ಸೆಸ್ ನಾಯಕರೊಬ್ಬರು ಹೇಳಿದ್ದಾರೆ.
“ವಿಶ್ವದಲ್ಲೇ ನಾರದ ಪ್ರಪ್ರಥಮ ಪತ್ರಕರ್ತರಾಗಿದ್ದಾರೆ. ಇದರಲ್ಲಿ ಎರಡು ಮಾತಿಲ್ಲ. ಇದು ನಂಬಿಕೆಯ ವಿಷಯವಾಗಿದೆ” ಎಂದು ಆರೆಸ್ಸೆಸ್ ನ ನಾಯಕ ನರೇಂದ್ರ ಜೈನ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
“ಪತ್ರಿಕೋದ್ಯಮದ ಪ್ರಮುಖ ಅಂಶಗಳು ನಾರದರಿಗೆ ತಿಳಿದಿತ್ತು. ಸಾವಿರಾರು ವರ್ಷಗಳ ಹಿಂದೆಯೇ ಅವರು ಪತ್ರಿಕೋದ್ಯಮದ ಮೂಲಭೂತ ಸಿದ್ಧಾಂತಗಳನ್ನು ಅವರು ಪಾಲಿಸಿದ್ದರು” ಎಂದು ಮತ್ತೊಬ್ಬ ಆರೆಸ್ಸೆಸ್ ನಾಯಕರು ಹೇಳಿರುವುದಾಗಿ ವರದಿಯಾಗಿದೆ.