‘ಕಾಲ’ ವಿರುದ್ಧ 100 ಕೋ. ರೂ. ಮಾನನಷ್ಟ ಮೊಕದ್ದಮೆ ಹೂಡಿದ ಪತ್ರಕರ್ತ !

Update: 2018-06-03 15:36 GMT

ಮುಂಬೈ, ಜು. 3: ಮುಂದಿನ ವಾರ ‘ಕಾಲಾ’ ಸಿನೆಮಾ ಬಿಡುಗಡೆಯಾಗಲಿದ್ದು, ಈ ನಡುವೆ ಸೂಪರ್ ಸ್ಟಾರ್ ರಜನಿಕಾಂತ್ ಕಾನೂನು ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ. ಮುಂಬೈ ಮೂಲದ ಪತ್ರಕರ್ತರೊಬ್ಬರು ರಜಿನಿಕಾಂತ್ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಿದ್ದಾರೆ ಹಾಗೂ 36 ಗಂಟೆಯ ಒಳಗಡೆ ಕ್ಷಮೆ ಕೋರುವಂತೆ ಆಗ್ರಹಿಸಿದ್ದಾರೆ.

‘ಕಾಲಾ’ ತಂಡ ತನ್ನ ತಂದೆಯಾದ ದಿವಂಗತ ಎಸ್. ತಿರವಿಯಂ ನಾಡರ್ ಅವರ ಪಾತ್ರವನ್ನು ಋಣಾತ್ಮಕವಾಗಿ ಚಿತ್ರಿಸಿದೆ ಎಂದು ಪತ್ರಕರ್ತ ಜವಾಹರ್ ನಾಡರ್ ಆರೋಪಿಸಿದ್ದಾರೆ.

ನನ್ನ ತಂದೆ ಬೆಲ್ಲ ಹಾಗೂ ಸಕ್ಕರೆ ವ್ಯಾಪಾರಿಯಾಗಿದ್ದರು. ಅವರು 1957ರಲ್ಲಿ ಮುಂಬೈಯಿಂದ ತಮಿಳುನಾಡಿನ ತೂತುಕುಡಿ ಜಿಲ್ಲೆಗೆ ವಲಸೆ ಬಂದಿದ್ದರು. ಈ ಸಂದರ್ಭ ಅವರನ್ನು ‘ಗುಡ್ವಾಲ ಸೇಥ್’ ಹಾಗೂ ‘ಕಾಲಾ ಸೇಥ್’ ಎಂಬ ಅಡ್ಡ ಹೆಸರಿನಿಂದ ಕರೆಯಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ. ಚಿತ್ರದಲ್ಲಿ ಪ್ರತಿಪಾದಿಸಿದಂತೆ ನನ್ನ ತಂದೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಂಡಿಲ್ಲ ಎಂದು ಅವರು ಹೇಳಿದ್ದಾರೆ. ಆದಾಗ್ಯೂ, ಸೂಕ್ತ ಸಮಯದಲ್ಲಿ ಪ್ರತ್ಯುತ್ತರ ನೀಡಲಿದ್ದೇವೆ ಎಂದು ನಟ ರಜಿನಿಕಾಂತ್ ಅವರ ತಂಡ ಹೇಳಿದೆ. ಲಿಖಿತ ಕ್ಷಮೆ ಕೋರುವಂತೆ ಆಗ್ರಹಿಸಿರುವ ನಾಡರ್, ಇದಕ್ಕೆ ವಿಫಲವಾದರೆ 100 ಕೋ. ರೂ. ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ನಾಡರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News