×
Ad

ಮುಂಬೈಯಲ್ಲಿ 100 ಕಟ್ಟಡಗಳು ಅಪಾಯದ ಸ್ಥಿತಿಯಲ್ಲಿ

Update: 2018-06-03 21:16 IST
ಸಾಂದರ್ಭಿಕ ಚಿತ್ರ

ಮುಂಬೈ, ಜೂ. 3: ನಗರದಲ್ಲಿರುವ 7 ಕಟ್ಟಡಗಳನ್ನು ಅತಿ ಅಪಾಯದಲ್ಲಿದೆ ಎಂದು ಘೋಷಿಸಲಾಗಿದೆ ಎಂದು ಮಹಾರಾಷ್ಟ್ರ ಗೃಹ ಹಾಗೂ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ತನ್ನ ವಾರ್ಷಿಕ ಮನ್ಸೂನ್ ಪೂರ್ವ ಸಮೀಕ್ಷೆಯಲ್ಲಿ ಹೇಳಿದೆ.

ಎಂಎಚ್‌ಎಎಯ ದುರಸ್ಥಿ ಮಂಡಳಿ ಅಡಿಯಲ್ಲಿ ಬರುವ ಈ 7 ಕಟ್ಟಡಗಳು 50 ವರ್ಷ ಹಳೆಯದು. ಈ ಕಟ್ಟಡಗಳಲ್ಲಿ 286 ಕುಟುಂಬಗಳು ವಾಸಿಸುತ್ತಿವೆ. ಇದರಲ್ಲಿ 117 ಕುಟುಂಬಗಳಿಗೆ ಅಧಿಕಾರಿಗಳು ನೋಟಿಸ್ ರವಾನಿಸಿದ್ದಾರೆ ಎಂದು ರಾಜ್ಯ ಗೃಹ ಖಾತೆ ಸಚಿವ ಪ್ರಕಾಶ್ ಮೆಹ್ತಾ ತಿಳಿಸಿದ್ದಾರೆ.

7 ಕಟ್ಟಡಗಳು ಅಪಾಯದಲ್ಲಿ ಇವೆ ಎಂಬುದನ್ನು ನಮ್ಮ ಸಮೀಕ್ಷೆ ಹೇಳಿದೆ. ಸುರಕ್ಷತೆ ಹಿನ್ನೆಲೆಯಲ್ಲಿ ತೆರವುಗೊಳ್ಳುವಂತೆ ಹಲವು ಕುಟುಂಬಗಳಿಗೆ ತಿಳಿಸಿದ್ದೇವೆ ಎಂದು ಮೆಹ್ತಾ ತಿಳಿಸಿದ್ದಾರೆ.

ಬೃಹನ್ಮುಂಬೈ ಕಾರ್ಪೊರೇಶನ್ ವ್ಯಾಪ್ತಿಯಲ್ಲಿ ಬರುವ 93 ಕಟ್ಟಡಗಳು ಶಿಥಿಲಗೊಂಡಿವೆ. ಈ ಕಟ್ಟಡಗಳು ನಗರಪಾಲಿಕೆ ಹಾಗೂ ಬೃಹನ್ಮುಂಬೈ ಕಾರ್ಪೊರೇಶನ್‌ನ ಸಿ1 (ಅಪಾಯದಲ್ಲಿರುವ) ವರ್ಗದಲ್ಲಿ ಬರುತ್ತದೆ ಎಂದು ಮೆಹ್ತಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News