ಚುನಾವಣೆಯಿಂದ ಅಬಕಾರಿ ಉದ್ಯಮಕ್ಕೆ ತೊಂದರೆ

Update: 2018-06-06 16:36 GMT

ಉಡುಪಿ, ಜೂ.6: ಚುನಾವಣೆ ಘೋಷಣೆಯಿಂದ ಮದ್ಯ ಮಾರಾಟಗಾರ ರಿಗೆ ಭಯದ ಸನ್ನಿವೇಶ ಉಂಟಾಗುತ್ತಿದೆ. ಪ್ರಜಾ ಪ್ರತಿನಿಧಿ ಕಾಯ್ದೆ ಪ್ರಕಾರ (135ಸಿ) ಚುನಾವಣೆ ಮತದಾನ ಮುಕ್ತಾಯವಾಗುವ 48 ಗಂಟೆಗಳ ಮೊದಲು ಸನ್ನದುಗಳನ್ನು ಮುಚ್ಚಬೇಕು. ಈಗ 54-55 ಗಂಟೆಗಳ ಕಾಲ ಮತ ದಾನಕ್ಕೆ ಮೊದಲು, ಎಣಿಕೆ ಸಂದಭರ್ದಲ್ಲೂ ಹೆಚ್ಚು ಅವಧಿ ಮುಚ್ಚುಗಡೆ ಮಾಡುತ್ತಾರೆ ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ್ ಹೆಗ್ಡೆ ಹೇಳಿದ್ದಾರೆ.

ಈ ಬಾರಿಯ ವಿಧಾನಸಬಾ ಚುನಾವಣೆ ಸಂದರ್ದಲ್ಲಂತೂ ಮದ್ಯ ಮಾರಾಟಗಾರರಿಗೆ ಉಸಿರುಗಟ್ಟಿಸುವ ವಾತಾವರಣವಿತ್ತು, ಗ್ರಾಪಂ ಚುನಾವಣೆ ಯಲ್ಲಿ ಚುನಾವಣೆ ನೀತಿ ಸಂಹಿತೆ ಇರುವಷ್ಟು ದಿನ ಮದ್ಯ ಮಾರಾಟ ಬಂದ್. ಇಷ್ಟೊಂದು ಬಂಡವಾಳ ಹೂಡಿದ, ಉದ್ಯೋಗ ನೀಡುವ, 18 ಸಾವಿರ ಕೋಟಿಗೂ ಮಿಕ್ಕಿದ ವರಮಾನವನ್ನು ಸರಕಾರಕ್ಕೆ ನೀಡುವ ಈ ಉದ್ಯಮದವರನ್ನು ಸರಕಾರ ಏಕೆ ಹೀಗೆ ಬುಗುರಿಯಂತೆ ಆಟಆಡಿಸುತ್ತಿದೆ ಎಂದವರು ಪ್ರಶ್ನಿಸಿದ್ದಾರೆ.

ಕೇವಲ ಮದ್ಯ ಮಾರಾಟಗಾರರಿಂದ ಅಥವಾ ಮದ್ಯದಿಂದ ಮಾತ್ರ ಮತದಾರರು ಪ್ರಲೋಭನೆಗೆ ಒಳಗಾಗುತ್ತಾರೆ ಎಂದು ಭಾವಿಸುವುದು ಸರಿಯೇ? ಈ ಬಗ್ಗೆ ಸಾರ್ವತ್ರಿಕ ಚುನಾವಣೆಗಳಲ್ಲಿ ಪ್ರಜಾ ಪ್ರತಿನಿಧಿ ಕಾಯ್ದೆ 135ಸಿ ಪ್ರಕಾರವೇ ಕ್ರಮ ಕೈಗೊಳ್ಳುವಂತೆ ಮತ್ತು ಪರಿಷತ್ ಚುನಾವಣೆಯನ್ನು ಇದರಿಂದ ಹೊರತು ಪಡಿಸುವಂತೆ ಸರಕಾರವನ್ನು ಒತ್ತಾಯಿಸಲಾಗುವುದು ಎಂದು ಗೋವಿಂದರಾಜ್ ಹೆಗ್ಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News