ಸಾಮರಸ್ಯದ ಸಂದೇಶ ಹರಡಲು ದೇವಸ್ಥಾನದಲ್ಲಿ ಇಫ್ತಾರ್ ಕೂಟ
Update: 2018-06-11 14:24 IST
ಲಕ್ನೋ, ಜೂ.11: ಕೋಮು ಸಾಮರಸ್ಯದ ಸಂದೇಶ ಹರಡುವ ಉದ್ದೇಶದೊಂದಿಗೆ ಇಲ್ಲಿನ ಮಂಕಮೇಶ್ವರ ದೇವಸ್ಥಾನದಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಲಾಯಿತು. ದೇವಸ್ಥಾನದಲ್ಲಿ ಇದೇ ಮೊದಲ ಬಾರಿಗೆ ಇಫ್ತಾರ್ ಆಯೋಜಿಸಲಾಗಿದೆ.
ಈ ಬಗ್ಗೆ ಮಾತನಾಡಿದ ದೇವಸ್ಥಾನದ ಮಹಾಂತ್ ದಿವ್ಯ ಗಿರಿ, ರಮಝಾನ್ ಪವಿತ್ರ ತಿಂಗಳಾಗಿದ್ದು, ಈ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಬೇಕು ಎಂದರು.
“ಉಪವಾಸದ ಸಂದರ್ಭ ಉಪವಾಸ ಮಾಡುತ್ತಿರುವ ಯಾರಿಗಾದರೂ ಸಹಾಯ ಮಾಡುವುದರಿಂದ ಪುಣ್ಯ ಲಭಿಸುತ್ತದೆ. ಪ್ರತಿಯೊಬ್ಬರು ಇಂತಹ ಕಾರ್ಯದಲ್ಲಿ ಭಾಗಿಯಾಗಬೇಕು ಎಂದರು.
“ಇದೊಂದು ಮಾದರಿ ಕಾರ್ಯವಾಗಿದೆ. ಕಾರ್ಯಕ್ರಮ ಆಯೋಜಿಸಿದ ರೀತಿಯೂ ಮೆಚ್ಚುವಂತದ್ದು. ಹಿಂದೂ ಮುಸ್ಲಿಮರ ನಡುವಿನ ಬಾಂಧವ್ಯವನ್ನು ಇದು ಮತ್ತಷ್ಟು ಗಟ್ಟಿಗೊಳಿಸಿದೆ” ಎಂದು ಇಮಾಮ್ ಅಬ್ದುಲ್ ಮನ್ನಾನ್ ಎಂಬವರು ಹೇಳಿದ್ದಾರೆ.