×
Ad

ಸಿಂಗಾಪುರದಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡ ಟ್ರಂಪ್

Update: 2018-06-11 20:56 IST

 ಸಿಂಗಾಪುರ, ಜೂ. 11: ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ಜೊತೆಗೆ ಮಂಗಳವಾರ ನಡೆಯಲಿರುವ ಸಭೆಯಿಂದ ಉತ್ತಮ ಫಲಿತಾಂಶ ಪಡೆಯುವ ಭರವಸೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

 ಸಿಂಗಾಪುರ ಪ್ರಧಾನಿ ಲೀ ಹಸಿಯನ್ ಲೂಂಗ್ ಜೊತೆ ಇಲ್ಲಿನ ಅಧ್ಯಕ್ಷೀಯ ಅರಮನೆ ‘ಇಸ್ತಾನ’ದಲ್ಲಿ ಸೋಮವಾರ ಮಧ್ಯಾಹ್ನದ ಭೋಜನ ಸ್ವೀಕರಿಸುತ್ತಿದ್ದ ವೇಳೆ ಟ್ರಂಪ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮೊದಲು ಉಭಯ ನಾಯಕರು ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿದರು. ಮಾತುಕತೆಗಳ ವೇಳೆ, ಶೃಂಗಸಭೆಯ ಸಿದ್ಧತೆಗಳಿಂದ ಹಿಡಿದು ಅಮೆರಿಕದ ವಾಣಿಜ್ಯ ತೆರಿಗೆ ಬೆದರಿಕೆಗಳವರೆಗಿನ ಎಲ್ಲ ವಿಷಯಗಳ ಬಗ್ಗೆ ಅವರು ಚರ್ಚಿಸಿದರು.

ಇದೇ ಸಂದರ್ಭದಲ್ಲಿ ಶೃಂಗಸಮ್ಮೇಳನವನ್ನು ಏರ್ಪಡಿಸಿರುವುದಕ್ಕಾಗಿ ಸಿಂಗಾಪುರಕ್ಕೆ ಟ್ರಂಪ್ ಕೃತಜ್ಞತೆ ಸಲ್ಲಿಸಿದರು.

ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ, ರಾಷ್ಟ್ರೀಯ ಭದ್ರತಾ ಸಲಹಾಗಾರ ಜಾನ್ ಬೋಲ್ಟನ್, ಶ್ವೇತಭವನ ಪತ್ರಿಕಾ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್ ಮತ್ತು ಶ್ವೇತಭವನ ಸಿಬ್ಬಂದಿ ಮುಖ್ಯಸ್ಥ ಜಾನ್ ಕೆಲ್ಲಿ ಭೋಜನ ಕೂಟದಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಅಧಿಕಾರಿಗಳು ಟ್ರಂಪ್‌ರ ಹುಟ್ಟುಹಬ್ಬ ಆಚರಿಸಿದರು. ಅವರು ಜೂನ್ 14ರಂದು 72ನೇ ವರ್ಷಕ್ಕೆ ಕಾಲಿಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News