ಭಯ್ಯೂಜಿ ಮಹಾರಾಜ್ ಆತ್ಮಹತ್ಯೆಗೆ ಮಧ್ಯಪ್ರದೇಶ ಸರಕಾರದ ಒತ್ತಡವೇ ಕಾರಣ
Update: 2018-06-12 21:32 IST
ಭೋಪಾಲ್, ಜೂ.12: ಆಧ್ಯಾತ್ಮಿಕ ಗುರು ಭಯ್ಯೂಜಿ ಮಹಾರಾಜ್ ರ ಆತ್ಮಹತ್ಯೆಗೆ ಮಧ್ಯಪ್ರದೇಶ ಸರಕಾರದ ಒತ್ತಡವೇ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
“ಸವಲತ್ತುಗಳನ್ನು ಸ್ವೀಕರಿಸುವಂತೆ ಹಾಗು ಸರಕಾರವನ್ನು ಬೆಂಬಲಿಸುವಂತೆ ಭಯ್ಯೂಜಿ ಮೇಲೆ ಮಧ್ಯಪ್ರದೇಶ ಸರಕಾರವು ಒತ್ತಡ ಹೇರಿತ್ತು. ಆದರೆ ಅವರು ಅದನ್ನು ನಿರಾಕರಿಸಿದ್ದರು. ಅವರು ತೀವ್ರ ಮಾನಸಿಕ ಒತ್ತಡದಲ್ಲಿದ್ದರು. ಈ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಯಲೇಬೇಕು” ಎಂದು ಕಾಂಗ್ರೆಸ್ ಮಾಧ್ಯಮ ಸಮಿತಿಯ ನಾಯಕ ಮನಕ್ ಅಗರ್ವಾಲ್ ಹೇಳಿದರು.
ಗುಂಡು ಹಾರಿಸಿಕೊಂಡು ಇಂದು ಭಯ್ಯೂಜಿ ಮಹಾರಾಜ್ ಆತ್ಮಹತ್ಯೆಗೆ ಶರಣಾಗಿದ್ದರು.