ಉಗ್ರರ ಭರ್ತಿಯಲ್ಲಿ ಏರಿಕೆಯಾಗಿಲ್ಲ:ಸೇನೆ

Update: 2018-06-12 16:18 GMT

ಶ್ರೀನಗರ,ಜೂ.12: ಕೇಂದ್ರವು ಕಾಶ್ಮೀರದಲ್ಲಿ ಘೋಷಿಸಿರುವ ಏಕಪಕ್ಷೀಯ ಕದನ ವಿರಾಮದ ಅವಧಿಯಲ್ಲಿ ಉಗ್ರರ ಭರ್ತಿಯಲ್ಲಿ ಏರಿಕೆಯಾಗಿರುವ ಯಾವುದೇ ಸೂಚನೆಗಳಿಲ್ಲ,ಆದರೆ ಪಾಕಿಸ್ತಾನವೂ ಈಗಲೂ ಗಡಿಯಾಚೆಯಿಂದ ಉಗ್ರರನ್ನು ಕಣಿವೆಯೊಳಗೆ ತಳ್ಳಲು ಪ್ರಯತ್ನಿಸುತ್ತಿದೆ ಎಂದು ಸೇನೆಯ ಚಿನಾರ್ ಕಾರ್ಪ್ಸ್‌ನ ಜನರಲ್ ಆಫೀಸರ್ ಕಮಾಂಡಿಂಗ್ ಆಗಿರುವ ಲೆ.ಜ.ಎ.ಕೆ ಭಟ್ಟ ಅವರು ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ರಮಝಾನ್ ತಿಂಗಳಲ್ಲಿ ಕದನ ವಿರಾಮವನ್ನು ಘೋಷಿಸಿರುವ ಕೇಂದ್ರದ ಕ್ರಮಕ್ಕೆ ಕಾಶ್ಮೀರದ ಜನರು ಉತ್ತಮವಾಗಿ ಸ್ಪಂದಿಸಿದ್ದಾರೆ ಮತ್ತು ಕಣಿವೆಯಲ್ಲಿ ಸ್ವಲ್ಪ ಮಟ್ಟಿಗೆ ಶಾಂತಿ ನೆಲೆಸಿದೆ ಎಂದ ಅವರು,ಕದನ ವಿರಾಮ ಮುಂದುವರಿಕೆಗೆ ಸಂಬಂಧಿಸಿದಂತೆ ಯಾವುದೇ ನಿರ್ಧಾರವನ್ನು ಕೇಂದ್ರ ಸರಕಾರವೇ ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಅದರ ನಿರ್ಧಾರವನ್ನು ಜಾರಿಗೊಳಿಸಲು ಸೇನೆಯು ಸಿದ್ಧವಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News