ಜೂ.14ರಂದು ರೆಡ್ ಕ್ರಾಸ್ ಸೊಸೈಟಿ ರಕ್ತ ನಿಧಿ ವತಿಯಿಂದ ವಿಶ್ವ ರಕ್ತದಾನ ದಿನ, ರಕ್ತದಾನಿಗಳಿಗೆ ಸನ್ಮಾನ

Update: 2018-06-13 08:35 GMT

ಮಂಗಳೂರು, ಜೂ.13: ರೆಡ್‌ಕ್ರಾಸ್ ಸೊಸೈಟಿ ರಕ್ತ ನಿಧಿ ವತಿಯಿಂದ ವಿಶ್ವ ರಕ್ತದಾನ ದಿನದ ಅಂಗವಾಗಿ ಜೂನ್ 14ರಂದು ಬೆಳಗ್ಗೆ 10 ಗಂಟೆಗೆ ನಗರದ ವೆನ್ಲಾಕ್ ಸರಕಾರಿ ಆಸ್ಪತ್ರೆಯ ಹಿಂಬದಿಯಲ್ಲಿರುವ ಐಎಂಎ ಸಭಾಂಗಣದಲ್ಲಿ ರಕ್ತದಾನ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ದ.ಕ. ರೆಡ್‌ಕ್ರಾಸ್ ಸೊಸೈಯ ಉಪಾಧ್ಯಕ್ಷ ಹಾಗೂ ರಕ್ತನಿಧಿ ಸಮಿತಿಯ ಅಧ್ಯಕ್ಷ ಡಾ.ಸುಶೀಲ್ ಜತ್ತನ್ನ ತಿಳಿಸಿದ್ದಾರೆ.

ನಗರದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವಾದ್ಯಂತ ಜೂ.14ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತಿದೆ. ಈ ಬಾರಿ ‘ಬೇರೊಬ್ಬರಿಗಾಗಿ ರಕ್ತದಾನ ಮಾಡಿ ಜೀವನವನ್ನು ಹಂಚಿಕೊಳ್ಳಿ’ ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯಲಿದೆ. ರಕ್ತದಾನದ ಬಗ್ಗೆ ಸಾರ್ವಜನಿಕರಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸುವ ಗುರಿ ಹೊಂದಲಾಗಿದೆ. ರಕ್ತದಾನ ಮಾಡಿದ ಪ್ರತಿಯೊಂದು ಕನಿಷ್ಠ ಮೂರು ಜೀವಗಳನ್ನು ಉಳಿಸಬಹುದು. ಈ ಬಾರಿಯ ರಕ್ತದಾನದ ದಿನದಂದು ರೆಡ್‌ಕ್ರಾಸ್ ಸೊಸೈಟಿಯ ಮೂಲಕ ಗರಿಷ್ಠ ರಕ್ತದಾನ ಮಾಡಿದ ಐವರನ್ನು ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಮಂಗಳೂರಿನಲ್ಲಿರುವ ದ.ಕ. ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿಯ ರಕ್ತ ನಿಧಿಯ ವತಿಯಿಂದ ಪ್ರತಿ ತಿಂಗಳು 259 ಯೂನಿಟ್ ರಕ್ತವನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಡಾ.ಸುಶೀಲ್ ಜತ್ತಣ್ಣ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದಲ್ಲಿ ಸಂಘಟಕರಾದ ಎಡ್ವರ್ಡ್ ವಾಸ್, ಪ್ರವೀಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News