ಆಪ್ ಸರಕಾರದ ಪ್ರತಿಭಟನೆ ಮೂರನೇ ದಿನಕ್ಕೆ: ಸಿಸೋಡಿಯಾರಿಂದ ಉಪವಾಸ-ಧರಣಿ ಆರಂಭ

Update: 2018-06-13 16:39 GMT

ಹೊಸದಿಲ್ಲಿ, ಜೂ. 13: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಅವರ ಸಂಪುಟ ಸಹೋದ್ಯೋಗಿಗಳು ಲೆಫ್ಟಿನೆಂಟ್ ಗವರ್ನರ್ ಬೈಜಾಲ್ ಅವರ ಕಚೇರಿಯಲ್ಲಿ ನಡೆಸುತ್ತಿರುವ ಧರಣಿ-ಪ್ರತಿಭಟನೆ ಮೂರನೇ ದಿನವಾದ ಬುಧವಾರ ಕೂಡ ಮುಂದುವರಿದಿದೆ.

ಈ ನಡುವೆ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅನಿರ್ಧಿಷ್ಟಾವದಿ ಉಪವಾಸ ಮುಷ್ಕರ ಆರಂಭಿಸಿದ್ದಾರೆ. ಮಂಗಳವಾರ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಉಪವಾಸ ಪ್ರತಿಭಟನೆ ಆರಂಭಿಸಿದ್ದರು. ಪ್ರತಿಭಟನೆ ನಡೆಸುತ್ತಿರುವ ಐಎಎಸ್ ಅಧಿಕಾರಿಗಳ ವಿರುದ್ಧ ಹಾಗೂ ಮನೆ ಬಾಗಿಲಿಗೆ ಪಡಿತರ ವಿತರಣೆ ಯೋಜನೆಗೆ ಅನುಮೋದನೆ ನೀಡುವಂತೆ ಆಗ್ರಹಿಸಿ ಕೇಜ್ರಿವಾಲ್ ಅವರೊಂದಿಗೆ ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್ ಹಾಗೂ ಗೋಪಾಲ ರೈ ಲೆಫ್ಟಿನೆಂಟ್ ಗವರ್ನರ್ ಅವರ ಕಚೇರಿಯಲ್ಲಿ ಸೋಮವಾರದಿಂದ ಧರಣಿ-ಪ್ರತಿಭಟನೆ ಆರಂಭಿಸಿದ್ದಾರೆ. ಕೇಜ್ರಿವಾಲ್ ಹಾಗೂ ಅವರ ಸಹೋದ್ಯೋಗಿಗಳಿಗೆ ಬೆಂಬಲ ನೀಡಲು ಆಪ್ ಶಾಸಕರು ಹಾಗೂ ಕಾರ್ಯಕರ್ತರು ಬುಧವಾರ ರಾಜ ನಿವಾಸಕ್ಕೆ ರ್ಯಾಲಿ ನಡೆಸಿದರು. ‘‘ನಾವು ನಮಗಾಗಿ ಇಲ್ಲಿ ಧರಣಿ ಕುಳಿತುಕೊಂಡಿಲ್ಲ. ನಾವು ದಿಲ್ಲಿಯ ಜನರಿಗಾಗಿ, ಶಾಲೆಗಳಿಗಾಗಿ, ನೀರಿಗಾಗೆ, ಕ್ಲಿನಿಕ್‌ಗಾಗಿ ಇಲ್ಲಿ ಧರಣಿ ಕುಳಿತಿದ್ದೇವೆ. ಇದರಿಂದ ದಿಲ್ಲಿ ಜನರು ಸೌಲಭ್ಯ ಪಡೆಯಲಿದ್ದಾರೆ’’ ಎಂದು ಕೇಜ್ರಿವಾಲ್ ಲೆಫ್ಟಿನೆಂಟ್ ಗವರ್ನರ್ ಕಚೇರಿಯಿಂದ ರವಾನಿಸಿದ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ಕೇಜ್ರಿವಾಲ್ ಅವರನ್ನು ತರಾಟೆಗೆ ತೆಗೆದು ಕೊಂಡಿರುವ ಬಿಜೆಪಿ ಹಾಗೂ ಕಾಂಗ್ರೆಸ್, ಲೆಫ್ಟಿನೆಂಟ್ ಗವರ್ನರ್ ಕಚೇರಿಯಲ್ಲಿ ಧರಣಿ ನೆಡಸಿರುವುದು ‘ಪ್ರಜಾಪ್ರಭುತ್ವದ ವ್ಯಂಗ್ಯ’ ಹಾಗೂ ನಾಟಕ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News