ಎಐಎಡಿಎಂಕೆ ಶಾಸಕರ ಅನರ್ಹ ಪ್ರಕರಣ: ಮದ್ರಾಸ್ ಹೈಕೋರ್ಟ್ ಭಿನ್ನ ತೀರ್ಪು

Update: 2018-06-14 09:19 GMT

  ಚೆನ್ನೈ, ಜೂ.14: ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದಲ್ಲಿ 18 ಎಐಎಡಿಎಂಕೆ ಶಾಸಕರನ್ನು ಉಚ್ಚಾಟನೆಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿ ಮದ್ರಾಸ್ ಹೈಕೋರ್ಟ್‌ನ ದ್ವಿಸದಸ್ಯ ಪೀಠ ಭಿನ್ನ ತೀರ್ಪು ಪ್ರಕಟಿಸಿದೆ. ಹೀಗಾಗಿ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ.

ಅಂತಿಮ ತೀರ್ಪು ಬರುವ ತನಕ ಬಹುಮತ ಸಾಬೀತಪಡಿಸುವ ಅಥವಾ ಉಪ ಚುನಾವಣೆ ನಡೆಸುವ ಅವಶ್ಯಕತೆಯಿಲ್ಲ ಎಂದು ನ್ಯಾಯಾಲಯ ಆದೇಶಿಸಿದೆ.

  ಮುಖ್ಯಮಂತ್ರಿ ಇ.ಪಳನಿಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಒ.ಪನೀರ್‌ಸೆಲ್ವಂ ನೇತೃತ್ವದ ಎಐಎಡಿಎಂಕೆ ಸರಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆದಿದ್ದ 18 ಎಐಎಡಿಎಂಕೆ ಶಾಸಕರನ್ನು ಸ್ಪೀಕರ್ ಪಿ. ಧನಪಾಲ್ ಕಳೆದ ಸೆಪ್ಟಂಬರ್‌ನಲ್ಲಿ ಅನರ್ಹಗೊಳಿಸಿದ್ದರು. ಶಾಸಕರು ಎಐಎಡಿಎಂಕೆಯಿಂದ ಉಚ್ಚಾಟಿಸಲ್ಪಟ್ಟಿದ್ದ ಟಿಟಿವಿ ದಿನಕರನ್‌ಗೆ ಬೆಂಬಲ ವ್ಯಕ್ತಪಡಿಸಿದ್ದರು.

  ಇಂದು ನಡೆದ ಅರ್ಜಿ ವಿಚಾರಣೆಯ ವೇಳೆ ಹೈಕೋರ್ಟ್‌ನ ಸಿಜೆ ಇಂದಿರಾ ಬ್ಯಾನರ್ಜಿ ಅವರು ಶಾಸಕರನ್ನು ಅನರ್ಹ ಗೊಳಿಸಿರುವ ಸ್ಪೀಕರ್ ಧನಪಾಲ್ ಆದೇಶವನ್ನು ಎತ್ತಿಹಿಡಿದರು. ಆದರೆ, ನ್ಯಾ.ಎಂ.ಸುಂದರ್ ಅವರು ಸ್ಪೀಕರ್ ಆದೇಶವನ್ನು ತಿರಸ್ಕರಿಸಿದ್ದಾರೆ. ಹೀಗಾಗಿ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News