ಹಿರಿಯರ ಮೇಲಿನ ದೌರ್ಜನ್ಯದಲ್ಲಿ ದೇಶದಲ್ಲೇ ಮಂಗಳೂರಿಗೆ ಮೊದಲ ಸ್ಥಾನ

Update: 2018-06-14 10:04 GMT

ಹೊಸದಿಲ್ಲಿ, ಜೂ.14: ಹಿರಿಯ ವ್ಯಕ್ತಿಗಳ ವಿರುದ್ಧ ಅತೀ ಹೆಚ್ಚು ಶೋಷಣೆ ನಡೆಯುವ ನಗರಗಳ ಪಟ್ಟಿಯಲ್ಲಿ ಮಂಗಳೂರು ಮೊದಲ ಸ್ಥಾನದಲ್ಲಿದೆ ಎಂದು ‘ಹೆಲ್ಪ್ ಏಜ್ ಇಂಡಿಯಾ’ದ ವರದಿ ತಿಳಿಸಿದೆ.

23 ನಗರಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, 47 ಶೇ.ದೊಂದಿಗೆ ಮಂಗಳೂರು ಹಿರಿಯ ವಯಸ್ಕರ ಮೇಲಿನ ದೌರ್ಜನ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಅಹ್ಮದಾಬಾದ್ (46 ಶೇ.) ದ್ವಿತೀಯ, ಭೋಪಾಲ್ (39 ಶೇ.) ತೃತೀಯ, ಅಮೃತಸರ (35 ಶೇ.) ನಾಲ್ಕನೆ ಸ್ಥಾನದಲ್ಲಿ ಹಾಗು ದಿಲ್ಲಿ (33 ಶೇ.) 5ನೆ ಸ್ಥಾನದಲ್ಲಿದೆ.

ದೌರ್ಜನ್ಯದ ಮಟ್ಟ, ರೂಪ, ತೀವ್ರತೆ ಹಾಗು ಹಿಂದಿನ ಕಾರಣಗಳನ್ನು ಅರ್ಥೈಸಲು ಸಮೀಕ್ಷೆಯು ಯತ್ನಿಸಿದ್ದು, 4ರಲ್ಲಿ ಇಂದು ಭಾಗ ಹಿರಿಯರು ವೈಯಕ್ತಿಕವಾಗಿ ಹಿಂಸೆಯನ್ನು ಅನುಭವಿಸಿದ್ದಾರೆ, ಇಂತಹ ಪ್ರಕರಣಗಳಲ್ಲಿ ಪುತ್ರರು ಅಥವಾ ಸೊಸೆಯಂದಿರೇ ದೌರ್ಜನ್ಯ ಎಸಗಿದರವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎನ್ನುವುದನ್ನು ಅಧ್ಯಯನವು ಕಂಡುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News