ನಾನು ಕೂಡ 'ಕಾಲಾ': ನಿರ್ದೇಶಕ ಪಾ ರಂಜಿತ್ ಗೆ ಮೇವಾನಿ ಪ್ರಶಂಸೆ

Update: 2018-06-14 10:03 GMT

ಚೆನ್ನೈ, ಜೂ.14: ರಜಿನಿಕಾಂತ್ ಅಭಿನಯದ 'ಕಾಲಾ' ಚಿತ್ರಕ್ಕೆ ವಿಮರ್ಶಕರು ಹಾಗು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದೀಗ ಚಿತ್ರವನ್ನು ವೀಕ್ಷಿಸಿರುವ ವಡ್ಗಾಮ್ ಕ್ಷೇತ್ರದ ಶಾಸಕ ಜಿಗ್ನೇಶ್ ಮೇವಾನಿ ಚಿತ್ರವನ್ನು ಮೆಚ್ಚಿ ಟ್ವೀಟ್ ಮಾಡಿದ್ದಾರೆ. 

ಮುಂಬೈಯ ಧಾರಾವಿ ಸ್ಲಮ್ ಗಳಲ್ಲಿರುವ ಬಡವರ ಮೇಲೆ ನಡೆಯುವ ಅನ್ಯಾಯದ ಬಗೆಗಿನ ಕಥೆಯಿರುವ ಪಾ ರಂಜಿತ್ ಅವರ ನಿರ್ದೇಶನದ ಈ ಚಿತ್ರಕ್ಕೆ ಹ್ಯಾಟ್ಸ್ ಆಫ್ ಹೇಳಿದ್ದಾರೆ ಮೇವಾನಿ. "ನಿನ್ನೆ ಕಾಲಾ ಚಿತ್ರ ವೀಕ್ಷಿಸಿದೆ. ನಾನು ಕೂಡ ಕಾಲಾ ಎಂದು ಅನಿಸಿತು. ಒಂದು ಒಳ್ಳೆಯ ಚಿತ್ರ. ನಮ್ಮ ಸೋದರ @ಭೀಮ್ಜಿ (ಕಬಾಲಿಯ ನಿರ್ದೇಶಕ ಕೂಡ) ಇನ್ನೊಂದು ಉತ್ತಮ ಚಿತ್ರ ನೀಡಿದ್ದಾರೆ ಹಾಗೂ ವ್ಯವಸ್ಥೆಗೆ  ಮನರಂಜನಾತ್ಮಕ ರೀತಿಯಲ್ಲಿ ಸವಾಲೆಸೆದಿದ್ದಾರೆ, ಪಾ ರಂಜಿತ್ ಬಗ್ಗೆ ಹೆಮ್ಮೆಯಿದೆ'' ಎಂದು ಮೇವಾನಿ ಟ್ವೀಟ್ ಮಾಡಿದ್ದಾರೆ.

"ಬ್ರಾಹ್ಮಣತ್ವದ ಸಿದ್ಧಾಂತಕ್ಕೆ ಚಾಣಾಕ್ಷ ಸಾಂಸ್ಕೃತಿಕ ಪ್ರತಿಕ್ರಿಯೆ'' ಎಂದು ಕಾಲಾ ಚಿತ್ರವನ್ನು ಬಣ್ಣಿಸಿರುವ ಮೇವಾನಿ ಈ ಬಗ್ಗೆ 'ದಿ ಪ್ರಿಂಟ್'ನಲ್ಲಿ ಲೇಖನವೊಂದನ್ನೂ ಬರೆದಿದ್ದಾರೆ.

"ರಜಿನಿಕಾಂತ್ ಅವರ ವ್ಯಕ್ತಿತ್ವ, ಅವರ ರಾಜಕೀಯ ನಿಲುವು ಹಾಗೂ ತೂತ್ತುಕುಡಿ ಘಟನೆಯ ಬಗ್ಗೆ ಅವರ ಪ್ರತಿಕ್ರಿಯೆಗಳಿಂದಾಗಿ ಅವರ ನಿಜ ಜೀವನ ಸಿನೆಮಾ ಜೀವನವನ್ನು ಹೋಲುತ್ತಿದೆಯೇ ಎಂಬ ಬಗ್ಗೆ ನನಗೆ  ಕೆಲವೊಂದು ಸಂದೇಹಗಳಿವೆ. ಆದರೆ ನನ್ನ ನಂಬಿಕೆ ರಜಿನಿಕಾಂತ್ ಅವರಿಗಿಂತ  ಈ ಚಿತ್ರವನ್ನು ಅಮೋಘವಾಗಿ ಪ್ರಸ್ತುತ ಪಡಿಸಿದ ಚಿತ್ರ ತಯಾರಕ ಪಾ ರಂಜಿತ್ ಅವರ ಮೇಲಿದೆ'' ಎಂದು ಮೇವಾನಿ ತಮ್ಮ ಲೇಖನದಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News