ಪತಿಯನ್ನು ಮರಕ್ಕೆ ಕಟ್ಟಿ ಹಾಕಿ ಪತ್ನಿ, ಪುತ್ರಿಯನ್ನು ಅತ್ಯಾಚಾರಗೈದ ದುಷ್ಕರ್ಮಿಗಳು

Update: 2018-06-14 14:20 GMT

ಬಿಹಾರ, ಜೂ.14: ವ್ಯಕ್ತಿಯೊಬ್ಬರನ್ನು ಮರಕ್ಕೆ ಕಟ್ಟಿ ಹಾಕಿದ ತಂಡವೊಂದು ಆತನ ಪತ್ನಿ ಹಾಗು 15 ವರ್ಷದ ಪುತ್ರಿಯನ್ನು ಅತ್ಯಾಚಾರಗೈದ ಘಟನೆ ಬಿಹಾರದ ಗಯಾ ಜಿಲ್ಲೆಯಲ್ಲಿ ನಡೆದಿದೆ.

ದಂಪತಿ ಹಾಗು ಪುತ್ರಿ ರಾತ್ರಿ ವೇಳೆ ಇಲ್ಲಿನ ಸೋನಿಧಾ ಗ್ರಾಮದಲ್ಲಿ ಸಾಗುತ್ತಿದ್ದಾಗ ಬಂದೂಕುಗಳೊಂದಿಗೆ ಬಂದ ತಂಡ ಅವರನ್ನು ಅಡ್ಡಗಟ್ಟಿತ್ತು. ಪತಿಯನ್ನು ಮರಕ್ಕೆ ಕಟ್ಟಿ ಹಾಕಿದ ನಂತರ ಪತ್ನಿ ಹಾಗು ಪುತ್ರಿಯನ್ನು ಈ ತಂಡ ಅತ್ಯಾಚಾರಗೈದಿತ್ತು ಎಂದು ಪೊಲೀಸ್ ಅಧಿಕಾರಿ ನಯ್ಯರ್ ಹಸ್ನೈನ್ ಖಾನ್ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ 20 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಇಬ್ಬರ ಗುರುತನ್ನು ಸಂತ್ರಸ್ತರು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News