ಅತ್ತೆ-ಮಾವ-ಭಾವ-ನಾದಿನಿಯರಿಗೆ ಹೊಸ ಬಟ್ಟೆಬರೆ ಕೊಡುವುದೇ ಗೌರವ

Update: 2018-06-15 13:05 GMT

ಮದುಮಗ ಮತ್ತು ಮದುಮಗಳ ಮನೆಯಲ್ಲಿ ಮೊದಲ ರಮಝಾನ್‌ನ ಇಫ್ತಾರ್ ಕೂಟವನ್ನು ವಿಶೇಷವಾಗಿ ಆಯೋಜಿಸಲಾಗುತ್ತಿತ್ತು. ಕುಟುಂಬದ ಸರ್ವರನ್ನೂ ಈ ಕೂಟಕ್ಕೆ ಆಹ್ವಾನ ನೀಡಲಾಗುತ್ತಿತ್ತು. ಹೊಸ ಮುಖಗಳ ಪರಿಚಯವೂ ಆಗಲೇ ಆಗುತ್ತಿತ್ತು. ಇನ್ನು ಈದುಲ್ ಫಿತ್ರ್ ಹತ್ತಿರ ಬರುತ್ತಲೇ ತಂದೆ, ತಾಯಿಗೆ, ಹೆಂಡತಿಗೆ, ಅತ್ತೆ, ಮಾವ, ಭಾವಂದಿರು, ನಾದಿನಿಯರಿಗೆ ಹೊಸ ಬಟ್ಟೆ ಖರೀದಿಸಿ ಕೊಡುವುದು ಕಡ್ಡಾಯ ಎಂಬಂತಿತ್ತು. ಹಾಗಾಗಿ ಯಾವೊಬ್ಬ ಮದುಮಗ ಕೂಡಾ ಮದುವೆಯಾದ ಬಳಿಕ ಎದುರಾಗುವ ಈದುಲ್ ಫಿತ್ರ್‌ಗಾಗಿ ಖರ್ಚು ಮಾಡುವುದಕ್ಕೆ ಹಿಂಜರಿಯಲಾರ. ಅತ್ತೆ ಮನೆಯ ಎಲ್ಲರಿಗೂ ಬಟ್ಟೆಬರೆ ಖರೀದಿಸದಿದ್ದರೆ ಹಬ್ಬದ ದಿನ ಅತ್ತೆಯ ಮನೆಗೆ ಹೋಗಲು ನಾಚಿಕೆಯಾಗುತ್ತಿತ್ತು. ಹಾಗಾಗಿ ಸಾಲ ಮಾಡಿಯಾದರೂ ಸರಿ, ಹಬ್ಬಕ್ಕೆ ಹೊಸ ಬಟ್ಟೆಬರೆಯನ್ನು ಉಡುಗೋರೆಯಾಗಿ ಎಲ್ಲರೂ ಕೊಡುತ್ತಿದ್ದರು. ನಾನೂ ಅಷ್ಟೇ, ಗೌರವದ ಪ್ರಶ್ನೆಯಾದ ಕಾರಣ ಪರಿಪಾಠದಂತೆ ಎಲ್ಲರಿಗೂ ಬಟ್ಟೆಬರೆ ಖರೀದಿಸಿ ಹೆಂಡತಿಯೊಂದಿಗೆ ಅತ್ತೆ ಮನೆಗೆ ತೆರಳಿ ಕೊಟ್ಟು ಬಂದಿದ್ದೆವು. ಆವಾಗ ಮನೆಯ ಎಲ್ಲರೂ ಖುಷಿಯಿಂದ ಸಂಭ್ರಮಿಸುವ ಆ ಕ್ಷಣಗಳು ನನಗೆ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಈಗ ಆ ಸಂಪ್ರದಾಯವಿದ್ದರೂ ಕೂಡ ಅಂದಿನ ಆ ಖುಷಿ ಈಗ ಕಾಣಲು ಸಾಧ್ಯವೇ ಇಲ್ಲ. ಯಾಕೆಂದರೆ, ಅಂದು ಗಂಡ-ಹೆಂಡತಿ ಜೊತೆಯಾಗಿ ಅತ್ತೆ ಮನೆಗೆ ತೆರಳಿ ಬಟ್ಟೆಬರೆ ಕೊಟ್ಟು ಬಂದರೆ, ಇಂದು ಇಬ್ಬರೂ ಜೊತೆಯಾಗಿ ಹೋಗುವುದು ಅಪರೂಪ. ಮದುಮಗ ಯಾವುದಾದರೂ ನೆಪ ಹೇಳಿ ತಪ್ಪಿಸಿಕೊಳ್ಳುತ್ತಾನೆ. ಹಾಗಾಗಬಾರದು. ಹಬ್ಬವನ್ನು ಎಲ್ಲರೂ, ಎಲ್ಲಾ ರೀತಿಯಿಂದಲೂ ಸಂಭ್ರಮಿಸಬೇಕು.

 ಹಾಜಿ ಮುಹಮ್ಮದ್ ಮಸೂದ್

ಅಧ್ಯಕ್ಷರು, ದಿ ಮುಸ್ಲಿಮ್ ಸೆಂಟ್ರಲ್ ಕಮಿಟಿ, ಮಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News