ಹೈದರಾಬಾದ್: ಅವಳಿ ಬುದ್ದಿಮಾಂದ್ಯ ಮಕ್ಕಳನ್ನು ಹತ್ಯೆಗೈದ ಸೋದರ ಮಾವ
Update: 2018-06-16 11:54 IST
ಹೈದರಾಬಾದ್, ಜೂ.16: ಹನ್ನೆರಡು ವರ್ಷ ಪ್ರಾಯದ ಅವಳಿ ಬುದ್ದಿಮಾಂದ್ಯ ಮಕ್ಕಳನ್ನು ಸೋದರ ಮಾವನೇ ಕತ್ತುಹಿಸುಕಿ ಸಾಯಿಸಿರುವ ಅಮಾನವೀಯ ಘಟನೆ ಹೈದರಾಬಾದ್‌ನ ಚೈತನ್ಯಪುರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅವಳಿ ಬುದ್ದಿಮಾಂದ್ಯ ಮಕ್ಕಳಾದ ಸೃಜನಾ ರೆಡ್ಡಿ ಹಾಗೂ ವಿಷ್ಣುವರ್ಧನ ರೆಡ್ಡಿಯನ್ನು ಸೋದರ ಮಾವ ಮಲ್ಲಿಕಾರ್ಜುನ ರೆಡ್ಡಿ ಇತರ ಇಬ್ಬರ ಜೊತೆಗೂಡಿ ಸಾಯಿಸಿದ್ದಾನೆ. ಬುದ್ದಿಮಾಂದ್ಯ ಮಕ್ಕಳಿಂದ ತನ್ನ ತಂಗಿ ಹಿಂಸೆ ಅನುಭವಿಸುತ್ತಿರುವುದನ್ನು ನೋಡಲಾಗದೆ ಈ ಕೃತ್ಯ ಎಸೆಗಿದ್ದಾಗಿ ರೆಡ್ಡಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಮಲ್ಲಿಕಾರ್ಜುನನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ರೆಡ್ಡಿಗೆ ಸಹಾಯ ಮಾಡಿರುವ ರೂಮ್‌ಮೇಟ್ ಹಾಗೂ ಟ್ಯಾಕ್ಸಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.