ಆರ್ಥಿಕ ಅಪರಾಧಿಗಳ ಸಂಪತ್ತಿನ ರಕ್ಷಣಾ ವೆಚ್ಚವನ್ನು ಕಡಿಮೆಗೊಳಿಸಲಿರುವ ಸರಕಾರ

Update: 2018-06-18 17:07 GMT

ಹೊಸದಿಲ್ಲಿ, ಜೂ.18: ಆರ್ಥಿಕ ಅಪರಾಧಿಗಳಿಂದ ಹಲವು ವರ್ಷಗಳಿಂದ ವಶಪಡಿಸಿಕೊಳ್ಳಲಾಗಿರುವ ಸಂಪತ್ತನ್ನು ರಕ್ಷಿಸಲು ಜಾರಿ ನಿರ್ದೇಶನಾಲಯವು ವಾರ್ಷಿಕ ಐವತ್ತು ಕೋಟಿಗೂ ಅಧಿಕ ವೆಚ್ಚ ಮಾಡುತ್ತಿದ್ದು ಈ ವೆಚ್ಚವನ್ನು ಕಡಿಮೆ ಮಾಡಲು ಹಣವಂಚನಾತಡೆ ಕಾಯ್ದೆಗೆ (ಪಿಎಂಎಲ್‌ಎ)ಗೆ ತಿದ್ದುಪಡಿ ತರಲು ಸರಕಾರ ಚಿಂತಿಸುತ್ತಿದೆ.

ಜಾರಿ ನಿರ್ದೇಶನಾಯಲವು ಹಣ ವಂಚನೆ ಹಾಗೂ ವಿದೇಶ ವ್ಯವಹಾರ ನಿಯಮಗಳ ಉಲ್ಲಂಘನೆಯ ಪ್ರಕರಣಗಳನ್ನು ತನಿಖೆ ನಡೆಸಿ ಅದಕ್ಕೆ ಸಂಬಂಧಿಸಿದ ಸಂಪತ್ತನ್ನು ವಶಪಡಿಸಿಕೊಳ್ಳುತ್ತದೆ. ಈ ಸೊತ್ತುಗಳ ನಿರ್ವಹಣೆಗಾಗಿ ಇಡಿಯು ಕೋಟ್ಯಂತರ ರೂ. ವೆಚ್ಚ ಮಾಡುತ್ತಿದೆ. ಇದನ್ನು ತಪ್ಪಿಸಲು ಹಲವು ಪರ್ಯಾಯ ವ್ಯವಸ್ಥೆಗಳನ್ನು ಯೋಚಿಸಲಾಗುತ್ತಿದೆ. ಅವುಗಳಲ್ಲಿ ಒಂದು, ಇಂಥ ಸೊತ್ತುಗಳನ್ನು ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ನ್ಯಾಯಾಲಯದಲ್ಲಿ ಠೇವಣಿ ಇಡುವುದು. ಒಂದು ವೇಳೆ ನ್ಯಾಯಾಲಯವು ಆರೋಪಿಯನ್ನು ಬಿಡುಗಡೆ ಮಾಡಿದರೆ ಆ ಹಣವನ್ನು ಆತನಿಗೆ ಹಸ್ತಾಂತರಿಸುವುದು. 2005ರಲ್ಲಿ ಪಿಎಂಎಲ್‌ಎ ಅನುಷ್ಠಾನಕ್ಕೆ ಬಂದ ನಂತರ ಜಾರಿ ನಿರ್ದೇಶನಾಲಯವು 30,000 ಕೋಟಿ ರೂ. ವೌಲ್ಯದ ಸೊತ್ತುಗಳು ಮತ್ತು ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿದೆ.

ಆದರೆ ಅದನ್ನು ನಗದಾಗಿ ಪರಿವರ್ತಿಸುವ ಹಾಗಿಲ್ಲ. ನ್ಯಾಯಾಲಯದಲ್ಲಿ ಈ ಪ್ರಕರಣಗಳು ಇತ್ಯರ್ಥಗೊಳ್ಳಲು ವರ್ಷಗಳೇ ಕಳೆಯುತ್ತವೆ. 2005ರಿಂದ ದೇಶಾದ್ಯಂತದ ನ್ಯಾಯಾಲಯಗಳಲ್ಲಿ 1,320 ಹಣ ವಂಚನಾ ಪ್ರಕರಣಗಳ ವಿಚಾರಣೆ ಬಾಕಿಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News