ಪಿಡಿಪಿ-ಬಿಜೆಪಿ ಮೈತ್ರಿ ‘ಅಪವಿತ್ರ’ವಾಗಿತ್ತು, ಅದು ಮುರಿದು ಬೀಳಲೇಬೇಕಿತ್ತು: ಕಾಂಗ್ರೆಸ್

Update: 2018-06-19 15:48 GMT

ಶ್ರೀನಗರ,ಜೂ.19: ಪಿಡಿಪಿ ಮತ್ತು ಬಿಜೆಪಿ ನಡುವಣ ಮೈತ್ರಿಯು ಅಪವಿತ್ರವಾಗಿತ್ತು,ಹೀಗಾಗಿ ಅದು ಮುರಿದು ಬೀಳುವುದು ನಿಶ್ಚಿತವಾಗಿತ್ತು ಎಂದು ಜಮ್ಮು-ಕಾಂಗ್ರೆಸ್ ಪ್ರದೇಶ ಕಾಂಗ್ರೆಸ್ ಸಮಿತಿಯು ಮಂಗಳವಾರ ಹೇಳಿದೆ.

ಅದೊಂದು ಅಪವಿತ್ರ ಮೈತ್ರಿಯಾಗಿತ್ತು ಮತ್ತು ಮೊದಲ ದಿನದಿಂದಲೇ ಅದು ಮುರಿಯುವ ನಿರೀಕ್ಷೆಯಿತ್ತು. ಅವರು ರಾಜ್ಯದ ಜನತೆಯನ್ನು ಮತ್ತು ಉಭಯ ಪಕ್ಷಗಳ ಬೆಂಬಲಿಗರನ್ನು ವಂಚಿಸಿದ್ದರು. ಅವರು ಪರಸ್ಪರ ವಿರುದ್ಧ ಅಜೆಂಡಾಗಳ ಆಧಾರದಲ್ಲಿ ಮತಗಳನ್ನು ಕೋರಿದ್ದರು ಎಂದು ಪಿಸಿಸಿ ಅಧ್ಯಕ್ಷ ಜಿ.ಎ.ಮೀರ್ ಹೇಳಿದರು.

ರಾಜ್ಯದಲ್ಲಿಯ ಪರಿಸ್ಥಿತಿಗೆ ಪಿಡಿಪಿಗಿಂತ ಬಿಜೆಪಿ ಹೆಚ್ಚು ಹೊಣೆಗಾರನಾಗಿದೆ,ಅದು ಸಮ್ಮಿಶ್ರ ಸರಕಾರದಲ್ಲಿ ಹೆಚ್ಚಿನ ಪಾಲು ಹೊಂದಿತ್ತು ಎಂದ ಅವರು,ಬಿಜೆಪಿ ರಾಷ್ಟ್ರೀಯ ಮಟ್ಟದಲ್ಲಿ ಬೃಹತ್ ಜನಾದೇಶ ಪಡೆದಿತ್ತು,ನಿಜ. ಆದರೆ ಅದು ಜಮ್ಮು-ಕಾಶ್ಮೀರಕ್ಕೆ ಬಂದಾಗ ಅದರ ಬಳಿ ಯಾವುದೇ ನೀತಿಗಳಿರಲಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News