ಮುಂದಿನ ಪ್ರಧಾನಿಯಾಗಿ ರಾಹುಲ್ ರನ್ನು ನೋಡ ಬಯಸುತ್ತೇನೆ: ಅಡ್ವಾಣಿಯ ಆಪ್ತ ಸುಧೀಂದ್ರ ಕುಲಕರ್ಣಿ

Update: 2018-06-19 16:04 GMT

ಮುಂಬೈ, ಜೂ.19: ಕಾಶ್ಮೀರ ಸಮಸ್ಯೆಗಳಂತಹ 'ದೊಡ್ಡ ಸಮಸ್ಯೆ'ಗಳನ್ನು ಪರಿಹರಿಸುವಂತಹ ಸಮರ್ಥ ನಾಯಕನೊಬ್ಬ ಭಾರತಕ್ಕೆ ಬೇಕಾಗಿದ್ದು, ಭವಿಷ್ಯದ ಪ್ರಧಾನಿಯಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ನೋಡಲು ಬಯಸಿರುವುದಾಗಿ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿಯವರ ಆಪ್ತ ಸುಧೀಂದ್ರ ಕುಲಕರ್ಣಿ ಹೇಳಿದ್ದಾರೆ.

ಪಾಕಿಸ್ತಾನ ಹಾಗು ಚೀನಾದೊಂದಿಗಿನ ಮನಸ್ತಾಪದ ಬಗ್ಗೆಯೂ ಪ್ರಸ್ತಾಪಿಸಿದ ಅವರು, ದೊಡ್ಡ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಧಾನಿ ಮೋದಿ ವಿಫಲರಾಗಿದ್ದಾರೆ ಎಂದವರು ಹೇಳಿದರು. ಇದೇ ಸಂದರ್ಭ ರಾಹುಲ್ ಗಾಂಧಿಯನ್ನು ಪ್ರಶಂಸಿಸಿದ ಅವರು, 'ಉತ್ತಮ ಮನಸ್ಸಿನ ನಾಯಕ' ಎಂದು ಬಣ್ಣಿಸಿದರು.

"ಪಾಕಿಸ್ತಾನದೊಂದಿಗಿನ ಸಮಸ್ಯೆ ಪರಿಹಾರಕ್ಕೆ ಏನು ಅಗತ್ಯ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಇದೇ ಕಾರಣಕ್ಕಾಗಿ ರಾಹುಲ್ ಗಾಂಧಿಯನ್ನು ಮುಂದಿನ ಪ್ರಧಾನಿಯಾಗಿ ನೋಡಲು ನಾನು ಬಯಸುತ್ತೇನೆ" ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News