ಚುನಾವಣೆ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಶೇರು ಮಾರಾಟ ರದ್ದು

Update: 2018-06-19 17:32 GMT

ಹೊಸದಿಲ್ಲಿ, ಜೂ. 19: ಚುನಾವಣಾ ವರ್ಷದಲ್ಲಿ ಏರ್ ಇಂಡಿಯಾ ಶೇರುಗಳನ್ನು ಮಾರಾಟ ಮಾಡದೇ ಇರಲು ಹಾಗೂ ಏರ್ ಇಂಡಿಯಾ ಕಾರ್ಯಾಚರಣೆಗೆ ಅಗತ್ಯವಿರುವ ನಿಧಿ ಪೂರೈಸಲು ಸರಕಾರ ನಿರ್ಧರಿಸಿದೆ ಎಂದು ಹಿರಿಯ ಅಧಿಕಾರಿ ಮಂಗಳವಾರ ತಿಳಿಸಿದ್ದಾರೆ.

ಸಾಲದಲ್ಲಿ ಮುಳುಗಿರುವ ಏರ್ ಇಂಡಿಯಾ ಪ್ರಸ್ತಾಪಿತ ಶೇ. 76 ವ್ಯೊಹಾತ್ಮಕ ಶೇರು ಮಾರಾಟ ಯಾವುದೇ ಬಿಡ್ಡರ್‌ಗಳನ್ನು ಆಕರ್ಷಿಸಿರಲಿಲ್ಲ. ಅದಾದ ಬಳಿಕ ಮೂರು ವಾರಕ್ಕಿಂತಲೂ ಕಡಿಮೆ ಅವಧಿಯಲ್ಲಿ ಸರಕಾರ ಈ ನಿರ್ಧಾರಕ್ಕೆ ಬಂದಿದೆ. ದಿನನಿತ್ಯದ ಕಾರ್ಯಾಚರಣೆಗೆ ಏರ್ ಇಂಡಿಯಾ ಶೀಘ್ರದಲ್ಲಿ ಸರಕಾರದಿಂದ ನಿಧಿ ಪಡೆಯಲಿದೆ. ಇದಲ್ಲದೆ, ಎರಡು ವಿಮಾನಗಳಿಗೆ ಆದೇಶ ನೀಡಲಾಗಿದೆ ಎಂದು ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಸಚಿವ ಅರುಣ್ ಜೇಟ್ಲಿ ಸೋಮವಾರ ಆಯೋಜಿಸಿದ್ದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಸಭೆಯಲ್ಲಿ ಪಿಯೂಶ್ ಘೋಯಲ್, ನಾಗರಿಕ ವಿಮಾನ ಯಾನ ಸಚಿವ ಸುರೇಶ್ ಪ್ರಭು, ಸಾರಿಗೆ ಸಚಿವ ನಿತಿನ್ ಗಡ್ಕರಿ, ಹಣಕಾಸು ಹಾಗೂ ನಾಗರಿಕ ವಿಮಾನ ಯಾನ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News