ಮುಖ್ಯ ಆರ್ಥಿಕ ಸಲಹೆಗಾರ ಸ್ಥಾನಕ್ಕೆ ಅರವಿಂದ್ ಸುಬ್ರಮಣಿಯನ್ ರಾಜೀನಾಮೆ

Update: 2018-06-20 15:35 GMT

ಹೊಸದಿಲ್ಲಿ, ಜೂ.20: ಕೇಂದ್ರ ಸರಕಾರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಈ ಕುರಿತು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ಕೆಲವು ದಿನಗಳ ಹಿಂದೆ ಅರವಿಂದ್ ಸುಬ್ರಮಣಿಯನ್ ವಿಡಿಯೊ ಕಾನ್ಫರೆನ್ಸ್ ಮೂಲಕ ನನ್ನ ಜೊತೆ ಮಾತುಕತೆ ನಡೆಸಿದ್ದರು. ಈ ವೇಳೆ ಅವರು ತಮ್ಮ ಕೌಟುಂಬಿಕ ಬದ್ಧತೆಯನ್ನು ನಿಭಾಯಿಸಲು ಅಮೆರಿಕಕ್ಕೆ ಮರಳುವುದಾಗಿ ತಿಳಿಸಿದ್ದರು. ಅವರು ಅದಕ್ಕೆ ನೀಡಿದ ಕಾರಣ ವೈಯಕ್ತಿಕವಾಗಿದ್ದು ಅವರಿಗೆ ಅತ್ಯಂತ ಮಹತ್ವದ್ದಾಗಿತ್ತು. ಹಾಗಾಗಿ ಅವರ ರಾಜೀನಾಮೆಯನ್ನು ಸ್ವೀಕರಿಸದೆ ನನಗೆ ಬೇರೆ ದಾರಿಯಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಅರವಿಂದ್ ಸುಬ್ರಮಣಿಯನ್ 2014ರ ಅಕ್ಟೋಬರ್ 16ರಂದು ಸರಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿ ನೇಮಕಗೊಂಡಿದ್ದರು. ಅವರ ಸೇವಾವಧಿ ಮುಗಿದ ನಂತರ ಒಂದು ವರ್ಷಗಳ ಕಾಲ ಅವರ ಸೇವಾವಧಿಯನ್ನು ವಿಸ್ತರಿಸಲಾಗಿತ್ತು. ಅವರು ಎಂದು ತಮ್ಮ ಸೇವೆಯನ್ನು ಕೊನೆಗೊಳಿಸಲಿದ್ದಾರೆ ಎಂಬ ಬಗ್ಗೆ ಜೇಟ್ಲಿ ಯಾವುದೇ ಮಾಹಿತಿ ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News